Site icon PowerTV

ದಿಗಂತ್-ಐಂದ್ರಿತಾ ಮ್ಯಾರೇಜ್ ಡೇಟ್ ಫಿಕ್ಸ್..!

ಸ್ಯಾಂಡಲ್ ವುಡ್ ಅಂಗಳದಲ್ಲಿ ಮತ್ತೊಂದು ಮದುವೆ ಸಂಭ್ರಮ ಮನೆ ಮಾಡಿದೆ. ದಿಗಂತ್ ಮತ್ತು ಐಂದ್ರಿತಾ ಮದುವೆ ಡೇಟ್ ಫಿಕ್ಸ್ ಆಗಿದೆ. ಬಹುಕಾಲದಿಂದ ಐಂದ್ರಿತಾ ಮತ್ತು ದಿಗಂತ್ ಒಬ್ಬರನ್ನೊಬ್ಬರು ಪ್ರೀತಿಸ್ತಾ ಇದ್ರು. ‘ಮನಸಾರೆ’ ಚಿತ್ರದಿಂದಲೇ ದಿಗಂತ್ ಮತ್ತು ಐಂದ್ರಿತಾ ಪ್ರೀತಿ ಬಲೆಯಲ್ಲಿ ಬಿದ್ದಿದ್ದರು. ಇದೀಗ ಮದುವೆಗೆ ರೆಡಿಯಾಗಿದ್ದಾರೆ.
ಡಿಸೆಂಬರ್ 11 ಅರಿಶಿನ ಶಾಸ್ತ್ರವಿದ್ದು, 12ರಂದು ದಿಗಂತ್ ಮತ್ತು ಐಂದ್ರಿತಾ ಸಿಂಪಲ್ಲಾಗಿ ಮ್ಯಾರೇಜ್ ಆಗಲಿದ್ದಾರೆ. 15ರಂದು ಫ್ರೆಂಡ್ಸ್ ಗೆ ಒಂದೊಳ್ಳೆ ಪಾರ್ಟಿ ಕೊಡಿಸ್ತಾರಂತೆ.
ದುಂದುವೆಚ್ಚ ಮಾಡದೇ ಮದ್ವೆ ಆಗೋ ಉದ್ದೇಶ ಆ್ಯಂಡಿ-ದಿಗ್ಗಿ ಸರಳ ಮದುವೆಗೆ ಮನಸ್ಸು ಮಾಡಿದ್ದಾರೆ. 9 ವರ್ಷದಿಂದ ದಿಗಂತ್ ಮತ್ತು ಐಂದ್ರಿತಾ ಪ್ರೀತಿ ಮಾಡ್ತಿದ್ದಾರೆ. ಇವರ ಮದ್ವೆಗೆ ಸ್ಯಾಂಡಲ್ ವುಡ್ ಸಾಕ್ಷಿ ಆಗಲಿದೆ.

Exit mobile version