Site icon PowerTV

ಸ್ಯಾಂಡಲ್ ವುಡ್ ಡೈರೆಕ್ಟರ್ ಶಂಕರ ಲಿಂಗ ಸುಗ್ನಳ್ಳಿ ಇನ್ನಿಲ್ಲ

 

ಸ್ಯಾಂಡಲ್ ವುಡ್ ಡೈರೆಕ್ಟರ್ ಶಂಕರ ಲಿಂಗ ಸುಗ್ನಳ್ಳಿ (56) ವಿಧಿವಶರಾಗಿದ್ದಾರೆ. ಎಚ್ 1 ಎನ್ 1ನಿಂದ ಬಳಲುತ್ತಿದ್ದ ಇವ್ರು ಬೆಂಗಳೂರಿನ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೀತಾ ಇದ್ರು.  ಚಿಕಿತ್ಸೆ ಫಲಿಸದೆ ನಿನ್ನೆ ರಾತ್ರಿ 12 ಗಂಟೆ ಸುಮಾರಿಗೆ ಇಹಲೋಕ ತ್ಯಜಿಸಿದ್ದಾರೆ.

‘ಹೋಳಿ’, ‘ವಿಜಯ ಕಂಕಣ’ ಮೊದಲಾದ ಚಿತ್ರಗಳನ್ನು ನೀಡಿರೋ ಇವ್ರು ಚಿಕಿತ್ಸೆಗಾಗಿ ಮನೆಯನ್ನೂ ಮಾರಾಟ ಮಾಡಿದ್ರು ಅಂತ ತಿಳಿದುಬಂದಿದೆ.  ಇವರ ಸ್ಥಿತಿಕಂಡು ಚಿತ್ರರಂಗದ ಕೆಲವ್ರು ಆಸ್ಪತ್ರೆ ಖರ್ಚು ನೋಡಿಕೊಳ್ಳೋದಾಗಿ ಹೇಳಿಕೊಂಡಿದ್ರು. ಆದ್ರೆ, ಶಂಕರ್ ಇನ್ನಿಲ್ಲ.  ಇವರು ಗದಗ ಜಿಲ್ಲೆಯ ಮುಂಡರಗಿ ಬಳಿಯ ಸುಗ್ನಳ್ಳಿ ಅವರು. ಅಲ್ಲಿಯೇ ಇವರ ಅಂತ್ಯ ಸಂಸ್ಕಾರ ನಡೆಯಲಿದೆ ಅಂತ ತಿಳಿದು ಬಂದಿದೆ.

Exit mobile version