Site icon PowerTV

ಬಿಎಸ್ ವೈ ಬದಲು ಹೊಸಮುಖದ ಹುಡುಕಾಟದಲ್ಲಿ ಹೈಕಮಾಂಡ್..?

ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆಗೆ ಹೈಕಮಾಂಡ್ ಚಿಂತಿಸಿದೆ ಅಂತ ಹೇಳಲಾಗ್ತಿದೆ. ಬಿಎಸ್ ವೈ ಅವ್ರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಬದಲಾಯಿಸಿದ್ರೆ ಸದ್ಯಕ್ಕೆ ಪಕ್ಷಕ್ಕೆ ಹಿನ್ನೆಡೆ ಆಗೋ ಸಾಧ್ಯತೆ ಹೆಚ್ಚಿರೋದ್ರಿಂದ ಇವ್ರನ್ನು ಬದಲಿಸಬೇಕೇ..? ಬೇಡವೇ ಅನ್ನೋ ಗೊಂದಲವು ಹೈಕಮಾಂಡ್ ಗಿದೆ.
ಯಡಿಯೂರಪ್ಪ ಅವ್ರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿ, ಬೇರೊಬ್ಬರನ್ನು ತರಬೇಕು ಅಂತ ಒಂದು ಗುಂಪು ಬಯಸಿದ್ದರೆ, ಇನ್ನೊಂದು ಟೀಮ್ ಬಿಎಸ್ ವೈ ಅವ್ರನ್ನು ಬಿಟ್ಟರೆ ಪಕ್ಷಕ್ಕೆ ನಷ್ಟ ಅಂತ ಹೇಳುತ್ತಿದೆ.
ಬಿಎಸ್ ವೈ ಬದಲಿಗೆ ಬೇರೊಬ್ಬರನ್ನು ರಾಜ್ಯಾಧ್ಯಕ್ಷ ಸ್ಥಾನಕ್ಕೆ ತಂದು ಕೂರಿಸಿದ್ರೆ ಮುಂದಿನ ಲೋಕಸಭಾ ಚುನಾವಣೆಗೆ ದೊಡ್ಡ ಹೊಡೆತ ಬೀಳುತ್ತೆ ಅನ್ನೋದು ಪ್ರಬಲ ಲಿಂಗಾಯತ ಕೋಮಿನ ವಾದ. ಮತ್ತೊಂದು ಟೀಮ್, ಬಿಎಸ್ ವೈ ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗುತ್ತಿಲ್ಲ ಅಂತ ಆರೋಪಿಸುತ್ತಿದೆ. ಆದ್ರಿಂದ ಹೈಕಮಾಂಡ್ ಯಾವ್ದೇ ಸ್ಪಷ್ಟ ನಿರ್ಧಾರಕ್ಕೆ ಬಂದಿಲ್ಲ ಅಂತ ತಿಳಿದುಬಂದಿದೆ.

Exit mobile version