Site icon PowerTV

ಎಲ್ಲಿದ್ದೀರಿ ಪ್ರತಾಪ್ ಸಿಂಹ..?

ಟಿಪ್ಪು ಜಯಂತಿಯನ್ನು ಆರಂಭದಿಂದಲೂ ವಿರೋಧಿಸುತ್ತಲೇ ಬಂದಿರೋ ಸಂಸದ ಪ್ರತಾಪ್ ಸಿಂಹ ಇಂದು ಬಿಜೆಪಿ ನಡೆಸುತ್ತಿರೋ ಪ್ರತಿಭಟನೆಯಲ್ಲಿ ಎಲ್ಲಿಯೂ ಕಾಣಿಸುತ್ತಿಲ್ಲ.
ಮೈಸೂರಿನ ಗಾಂಧಿ ಸರ್ಕಲ್ ನಲ್ಲಿ ನಡೆದ ಪ್ರತಿಭಟನೆಯ ನೇತೃತ್ವವನ್ನು ಪ್ರತಾಪ್ ಸಿಂಹ ವಹಿಸಿಕೊಳ್ಳಬೇಕಿತ್ತು. ಪ್ರತಾಪ್ ಕಾಣದ ಹಿನ್ನೆಲೆಯಲ್ಲಿ ಕಾರ್ಯಕರ್ತರು ಎಲ್ಲಿದ್ದೀರಿ ಪ್ರತಾಪ್ ಸಿಂಹ..? ಅಂತ ಕೇಳ್ತಿದ್ದಾರೆ.
ಬಿಜೆಪಿ ಯುವಮೋರ್ಚಾ ರಾಜ್ಯಾಧ್ಯಕ್ಷ ಆಗಿರೋ ಪ್ರತಾಪ್ ಸಿಂಹ ಕೊಡಗು-ಮೈಸೂರು ಸಂಸದರು. ಎಲ್ರಿಗೂ ಗೊತ್ತಿರುವಂತೆ ಇವ್ರು ಟಿಪ್ಪು ಜಯಂತಿಯನ್ನು ವಿರೋಧಿಸ್ತಾ ಬಂದಿದ್ದಾರೆ. ಇವತ್ತು ಟಿಪ್ಪು ಜಯಂತಿ ಹಿನ್ನೆಲೆಯಲ್ಲಿ ಬಿಜೆಪಿ ಪ್ರತಿಭಟನೆ ನಡೆಸ್ತಾ ಇದೆ. ಆದ್ರೆ, ಪ್ರತಾಪ್ ಸಿಂಹ ಮಾತ್ರ ಕೊಡಗಿನಲ್ಲೂ ಇಲ್ಲ, ಮೈಸೂರಿನಲ್ಲೂ ಇಲ್ಲ. ನಿನ್ನೆಯಿಂದಲೇ ಪ್ರತಾಪ್ ಸಿಂಹ ಕಾಣಿಸ್ತಾ ಇಲ್ಲ. ಇಂದು ಪ್ರತಿಭಟನೆಗೆ ಗೈರಾಗಿರೋದ್ರಿಂದ ಕಾರ್ಯಕರ್ತರಲ್ಲಿ ಪ್ರತಾಪ್ ಸಿಂಹ ಎಲ್ಲಿದ್ದಾರೆ ಅಂತ ಚರ್ಚೆ ಆಗ್ತಾ ಇದೆ.

Exit mobile version