Site icon PowerTV

ರೆಬಲ್ ಸ್ಟಾರ್ ಅಂಬಿ ರೆಕಾರ್ಡ್ ಬ್ರೇಕ್ ಮಾಡಿದ ಶಿವರಾಮೇಗೌಡ..!

ಮಾಜಿ ಸಂಸದ, ನಟ ರೆಬಲ್ ಸ್ಟಾರ್ ಅಂಬರೀಶ್ ಅವರ ರೆಕಾರ್ಡ್ ಅನ್ನು ಜೆಡಿಎಸ್ ಕ್ಯಾಂಡಿಡೇಟ್ ಎಲ್. ಆರ್ ಶಿವರಾಮೇ ಗೌಡ ಬ್ರೇಕ್ ಮಾಡಿದ್ದಾರೆ.
ಹೌದು, ಮಂಡ್ಯ ಲೋಕಸಭಾ ಬೈ ಎಲಕ್ಷನ್ ನಲ್ಲಿ ಶಿವರಾಮೇ ಗೌಡ ಹಿಂದೊಮ್ಮೆ ಅಂಬಿ ಪಡೆದಿದ್ದ ದಾಖಲೆಯ ಮತಕ್ಕಿಂತ ಹೆಚ್ಚಿನ ಮತವನ್ನು ಪಡೆದು 20 ವರ್ಷದಿಂದ ಅಂಬರೀಶ್ ಹೆಸರಲ್ಲಿದ್ದ ದಾಖಲೆ ಮುರಿದಿದ್ದಾರೆ. 1998ರಲ್ಲಿ ಅಂಬರೀಶ್ 1,80,523 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಇದೀಗ ಮೈತ್ರಿ ಕ್ಯಾಂಡಿಡೇಟ್ ಶಿವರಾಮೇಗೌಡ 1,84,972 ಮತಗಳ ಮುನ್ನಡೆ ಕಾಯ್ದುಕೊಂಡಿದ್ದು ಅಂಬಿ ರೆಕಾರ್ಡ್ ಬ್ರೇಕ್ ಮಾಡುವಲ್ಲಿ ಯಶಸ್ವಿ ಆಗುವುದರ ಜೊತೆಗೆ ಭಾರೀ ಅಂತರದ ಗೆಲುವು ಪಡೆಯೋದು ನಿಶ್ಚಿತ ಆಗಿದೆ.

Exit mobile version