Site icon PowerTV

ಲಕ್ಷ್ಮೀ ಹೆಬ್ಬಾಳ್ಕರ್​ಗೆ ಎಐಸಿಸಿ ಕೊಕ್​..!

ಲಕ್ಷ್ಮೀ ಹೆಬ್ಬಾಳ್ಕರ್​ಗೆ ಎಐಸಿಸಿ ಕೊಕ್​ ನೀಡಿದೆ. ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷರಾಗಿ ಡಾ. ಬಿ ಪುಷ್ಪ ಅಮರನಾಥ್ ಅವರನ್ನು ಆಯ್ಕೆ ಮಾಡಲಾಗಿದೆ.
ಪುಷ್ಪಾ ಅಮರನಾಥ್ ರನ್ನು ಮಹಿಳಾಘಟಕದ ಅಧ್ಯಕ್ಷರಾಗಿ ಇಂದು ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ​ ಅನುಮೋದಿಸಿದ್ದಾರೆ. ಸಚಿವ ಡಿ,ಕೆ ಶಿವಕುಮಾರ್ ಅವ್ರ ಬಣದಲ್ಲಿ ಗುರುತಿಸಿಕೊಂಡಿರೋ ಲಕ್ಷ್ಮೀ ಹೆಬ್ಬಾಳ್ಕರ್ ಅವ್ರ ಸ್ಥಾನಕ್ಕೆ ಈಗ ಮಾಜಿ ಸಿಎಂ ಸಿದ್ದರಾಮಯ್ಯ ಬಣದಲ್ಲಿ ಗುರುತಿಸಿಕೊಂಡಿದ್ದ ಪುಷ್ಪಾ ಅಮರನಾಥ್ ಬಂದಿದ್ದಾರೆ.
ಬೆಳಗಾವಿಯಲ್ಲಿ ಜಾರಕಿಹೊಳಿ ಬ್ರದರ್ಸ್ ವಿರುದ್ಧ ಜಗಳದಿಂದ ಹೆಬ್ಬಾಳ್ಕರ್ ವಿವಾದದ ಕೇಂದ್ರವಾಗಿದ್ರು. ಅಷ್ಟೇ ಅಲ್ದೆ ಅವ್ರು ನೀಡಿದ್ದ ಹೇಳಿಕೆಗಳಿಂದ ಕಾಂಗ್ರೆಸ್ ನ ಕೆಲ ನಾಯಕರಿಗೆ ಮುಜುಗರವಾಗಿತ್ತು. 

ಪುಷ್ಪಾ ಅಮರ್ ನಾಥ್ ಜಿಲ್ಲಾ ಪಂಚಾಯತ್ ನ ಮಾಜಿ ಅಧ್ಯಕ್ಷೆಯಗಿದ್ದು, ಹಾಲಿ ಸದಸ್ಯೆಯಾಗಿದ್ದಾರೆ. ಈಗ ಬನ್ನಿಗುಪ್ಪೆ ಕ್ಷೇತ್ರ ಪ್ರತಿನಿಧಿಸಿದ್ದಾರೆ. ಇನ್ನು ಸಸ್ಯಶಾಸ್ತ್ರದಲ್ಲಿ ಪಿಹೆಚ್​ಡಿ ಮಾಡಿದ್ದಾರೆ,

Exit mobile version