Site icon PowerTV

ಕ್ಯಾನ್ಸರ್ ಗೆದ್ದು ಬರ್ತಾರೆ ಸೋನಾಲಿ- ನಮ್ರತಾ

ಬಾಲಿವುಡ್ ನ ಟಾಪ್ ನಟಿಯರಲ್ಲಿ ಒಬ್ಬರಾಗಿರೋ ಸೋನಾಲಿ ಬೇಂದ್ರೆ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಇದು ಎಲ್ರಿಗೂ ಗೊತ್ತಿರೋ ನ್ಯೂಸೇ. ಅಮೆರಿಕಾದ ನ್ಯೂಯಾರ್ಕ್ ನಲ್ಲಿ ಸೋನಾಲಿ ಚಿಕಿತ್ಸೆ ಪಡೀತಾ ಇದ್ದಾರೆ. ಚಿತ್ರರಂಗದವರು ಸೇರಿದಂತೆ ಸಾಕಷ್ಟು ಮಂದಿ ಗಣ್ಯರು ಅವರ ನ್ಯೂಯಾರ್ಕ್ ಗೆ ಹೋಗಿ ಆರೋಗ್ಯ ವಿಚಾರಿಸಿಕೊಂಡು ಬರ್ತಿದ್ದಾರೆ.

ಪ್ರಿಯಾಂಕ ಚೋಪ್ರಾ, ಅನುಪಮ್ ಖೇರ್,  ಸೋಜೇನ್ ಖಾನ್, ನೀತು ಸಿಂಗ್ ಸೇರಿದಂತೆ ಸಾಕಷ್ಟು ಮಂದಿ ಸೋನಾಲಿ ಅವ್ರನ್ನು ಭೇಟಿ ಮಾಡಿದ್ರು, ಈಗ ಬಾಲಿವುಡ್ ನಟಿ ನಮ್ರತಾ ಶಿರೋದ್ಕರ್ ಸೋನಾಲಿ ಅವ್ರನ್ನು ನೋಡ್ಕೊಂಡು ಬಂದಿದ್ದಾರೆ. ಅವರ ಆರೋಗ್ಯ ವಿಚಾರಿಸಿಕೊಂಡು ಬಂದಿರೋ ನಮ್ರತಾ, `ಸೋನಾಲಿ ದಿಟ್ಟ ಮಹಿಳೆ. ಕ್ಯಾನ್ಸರ್ ನಿಂದ ಗುಣ ಮುಖರಾಗಿಯೇ ಆಗುತ್ತಾರೆ” ಅಂತ ಹೇಳಿದ್ದಾರೆ.

 

 

Exit mobile version