Site icon PowerTV

ಮೀ ಟೂ ಫೈಟ್ : ಮೌನ ಮುರಿದ ಹಿರಿಯ ನಟಿ ಶ್ರುತಿ..!

ನಟ ಅರ್ಜುನ್ ಸರ್ಜಾ ಮತ್ತು ನಟಿ ಶ್ರುತಿ ಹರಿಹರನ್ ಅವರ ನಡುವಿನ ಮೀ ಟೂ ಫೈಟ್ ಬಗ್ಗೆ ಹಿರಿಯ ನಟಿ ಶ್ರುತಿ ಮೌನ ಮುರಿದಿದ್ದಾರೆ. ಪ್ರಕರಣದ ಬಗ್ಗೆ ಮಾತಾಡಿರೋ ಶ್ರುತಿ, ಅರ್ಜುನ್ ಸರ್ಜಾ ಮತ್ತು ಶ್ರುತಿ ಹರಿಹರನ್ ಇಬ್ಬರನ್ನೂ ಕೂಡ ನಾನು ಬಲ್ಲೆ. ಶ್ರುತಿ ಹರಿಹರನ್ ನಂಗೆ ತುಂಬಾ ಆತ್ಮೀಯರು. ಅರ್ಜುನ್ ಸರ್ಜಾ ಜೊತೆ ಕೂಡ ನಾನು ಆ್ಯಕ್ಟ್ ಮಾಡಿದ್ದೀನಿ.
ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರ ಆರೋಪವನ್ನು ಕೂಡ ನಾನು ಅಲ್ಲೆಗಳೆಯೋದಿಲ್ಲ. #MeToo ಒಂದೊಳ್ಳೆ ಕ್ಯಾಂಪೇನ್. ಇದನ್ನು ಯಾರೂ ಕೂಡ ಮಿಸ್ ಯೂಸ್ ಮಾಡಿಕೊಳ್ಳ ಬಾರದು. ಹೆಣ್ಮಕ್ಕಳು ತಮಗಾದ ಅನ್ಯಾಯವನ್ನು ಕೂಡಲೇ ಬೆಳಕಿಗೆ ತರ್ಬೇಕು. ಈ ಪ್ರಕರಣದಲ್ಲಿ ಇಬ್ಬರಿಗೂ ನ್ಯಾಯ ಸಿಗಬೇಕು ಅಂತ ಶ್ರುತಿ ಹೇಳಿದ್ದಾರೆ.

Exit mobile version