Site icon PowerTV

ದೇವೇಗೌಡ್ರು ಶನಿ – ಈಶ್ವರಪ್ಪ

ಮಾಜಿ ಡಿಸಿಎಂ, ಹಾಲಿ ಶಾಸಕ ಕೆ.ಎಸ್ ಈಶ್ವರಪ್ಪ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಮತ್ತು ಸಚಿವ ಎಚ್.ಡಿ ರೇವಣ್ಣ ಅವ್ರನ್ನು ಶನಿ-ಕೇತುಗೆ ಹೋಲಿಸಿದ್ದಾರೆ.
ಬಾಗಲಕೋಟೆಯಲ್ಲಿ ಮಾತಾಡಿದ ಈಶ್ವರಪ್ಪ, ದೇವೆಗೌಡ್ರು ಶನಿ, ರೇವಣ್ಣ ಕೇತು. ಈ ಶನಿ ಮತ್ತು ಕೇತುವನ್ನು ಕಟ್ಕೊಂಡು ಸಿದ್ಧರಾಮಯ್ಯ ಎಲೆಕ್ಷನ್ ಎದುರಿಸ್ತಿದ್ದಾರೆ ಅಂದ್ರು.
ಸಿದ್ದರಾಮಯ್ಯ ದೇವೇಗೌಡ್ರ ಬೆನ್ನಿಗೆ, ಕುಮಾರಸ್ವಾಮಿ ಸಿದ್ದರಾಮಯ್ಯ ಅವ್ರ ಬೆನ್ನಿಗೆ ಚಾಕು ಹಿಡಿದು ನಿಂತಿದ್ದಾರೆ. ಯಾವಾಗ ಇವ್ರು ಸಾಯ್ತಾರೋ ಗೊತ್ತಿಲ್ಲ. ಮೈತ್ರಿ ಸರ್ಕಾರ ಮುಳುಗುತ್ತಿರೋ ಹಡಗು. ತಾನೇ ಮುಖ್ಯಮಂತ್ರಿ ಅಂತ ಸಿದ್ದರಾಮಯ್ಯ ಹಗಲು ಕನಸು ಕಾಣ್ತಿದ್ದಾರೆ. ಬ್ರಹ್ಮ ಬಂದ್ರೂ ಸಿದ್ದರಾಮಯ್ಯ ಮತ್ತೆ ಸಿಎಂ ಆಗಲ್ಲ. ಇವ್ರು ಧರ್ಮ ಒಡೆದವರು. ಚಾಮುಂಡೇಶ್ವರಿಯಲ್ಲಿ ಜನ ಅವ್ರನ್ನು ಸೋಲಿಸಿ ಬಿಸಾಕಿದ್ದಾರೆ ಅಂತ ಹೇಳಿದ್ದಾರೆ.

Exit mobile version