Site icon PowerTV

ಭಾರತದ ಮೊದಲ ಮಹಿಳಾ ಐಎಎಸ್ ಆಫೀಸರ್ ಮದ್ವೆ ಆಗಿದ್ದು ಅವರ ಬ್ಯಾಚ್ ಮೇಟನ್ನೇ….!  ಅವರ್ಯಾರು ಗೊತ್ತಾ?

ಅನ್ನಾ ರಾಜಮ್ ಜಾರ್ಜ್ ಅಥವಾ ಅನ್ನಾ ರಾಜಮ್ ಮಲ್ಹೋತ್ರಾ  ಈ ಹೆಸರು ಎಲ್ಲೋ ಕೇಳಿದಂಗೆ ಇದೆಯಲ್ಲಾ ಅಂತ ಯೋಚಿಸ್ತಿದ್ದೀರಾ? ಹುಂ .. ಈ ಹೆಸರನ್ನು ಖಂಡಿತವಾಗಿಯೂ ಕೇಳಿರ್ತೀರಿ. ಭಾರತದ ಮೊಟ್ಟ ಮೊದಲ ಮಹಿಳಾ ಐಎಎಸ್ ಆಫೀಸರ್ ಇವ್ರು.

ಕೇರಳದ ಎರ್ನಾಕುಲಂ ಜಿಲ್ಲೆಯ ನಿರನಂ ಅನ್ನೋ ಊರಲ್ಲಿ 1927ರ ಜುಲೈ 17ರಂದು ಹುಟ್ಟಿದ್ದು. ತಂದೆ  ಒ.ಎ ಜಾರ್ಜ್, ತಾಯಿ ಅನ್ನಾ ಪೌಲ್, ಅಜ್ಜ ಮಲೆಯಾಳಂ ಸಾಹಿತಿ ಪೈಲೋ ಪೌಲ್. 

ಕ್ಯಾಲಿಕಟ್ನ ಪ್ರಾವಿಡೆನ್ಸ್ ವುಮೆನ್ಸ್ ಕಾಲೇಜಲ್ಲಿ ಇಂಟರ್ ಮೀಡಿಯೆಟ್ ಎಜುಕೇಶನ್,  ಮಲ್ಬಾರ್ ಕ್ರಿಶ್ಚಿಯನ್ ಕಾಲೇಜಲ್ಲಿ ಬ್ಯಾಚುಲರ್ ಡಿಗ್ರಿ ಮುಗಿಸಿದ ಮಲ್ಹೋತ್ರಾ ಹೈಯರ್ ಎಜುಕೇಶನ್ ಮಾಡಿದ್ದು ಮದ್ರಾಸ್​ನಲ್ಲಿ. ಮದ್ರಾಸ್ ಯೂನಿವರ್ಸಿಟಿಯಿಂದ ಇಂಗ್ಲಿಷ್​ನಲ್ಲಿ ‌ಮಾಸ್ಟರ್ ಡಿಗ್ರಿ‌ ಮಾಡಿದ್ದಾರೆ.

ಮಾಸ್ಟರ್ ಡಿಗ್ರಿ ಮುಗಿಸಿದ್ದು 1949ರಲ್ಲಿ. ಆಮೇಲೆ 1950 ರಲ್ಲಿ ಸಿವಿಲ್ ಸರ್ವೀಸ್ ಎಕ್ಸಾಮ್ ಬರೆಯೋಕೆ ಡಿಸೈಡ್ ಮಾಡಿದ್ರು. ಇಂಟರ್ ವ್ಯೂ ರೌಂಡ್​ಗೆ ಸೆಲೆಕ್ಟ್ ಆದ್ರು.  ಸಿವಿಲ್ ಸರ್ವೀಸ್ ಎಕ್ಸಾಮಿ‌ನೇಷನ್​ನಲ್ಲಿ ಈ ರೌಂಡ್ ತಲುಪಿದ ಮೊದಲ ಮಹಿಳೆ ತಾನೇ ಅಂತ ಸ್ವತಃ ಮಲ್ಹೋತ್ರಾ ಅವರಿಗೂ ಆಗ ಗೊತ್ತಿರ್ಲಿಲ್ಲ.‌ಇಂಟರ್ ವ್ಯೂ ರೌಂಡ್ ಆಯ್ತು, ಸೆಲೆಕ್ಷನ್ ಟೈಮಲ್ಲಿ ಮಹಿಳೆಯರಿಗೆ ಐಎಎಸ್ (ಇಂಡಿಯನ್ ಅಡ್ಮಿನಿಸ್ಟ್ರೇಶನ್ ಸರ್ವೀಸ್) ಆಗಲ್ಲ, ಫಾರಿನ್ ಸರ್ವೀಸ್ (ಐಎಫ್ ಎಸ್) ಅಥವಾ ಸೆಂಟ್ರಲ್ ಸರ್ವೀಸ್ (ಐಸಿಎಸ್) ಆಫರ್ ಮಾಡಿದ್ರು ಇಂಟರ್ ವ್ಯೂ ನಡೆಸಿದ್ದ ಯುಪಿಎಸ್ ಚೇರ್​ಮನ್  ಆಗಿದ್ದ ಆರ್. ಎನ್ ಬ್ಯಾನರ್ಜಿ ಮತ್ತು ಅಧಿಕಾರಿಗಳು. ಆದ್ರೆ, ನಾನು ಐಎಎಸ್ಸೇ ಆಯ್ಕೆ ಮಾಡ್ಕೊಳ್ಳೋದು ಅಂತ ಪಟ್ಟು ಹಿಡಿದ್ರು ಮಲ್ಹೋತ್ರಾ. ಒಳ್ಳೆಯ ರ್ಯಾಂಕ್​ ಕೂಡ ಬಂದಿತ್ತು. ಐಎಎಸ್ ಗೆ ಡಿಸರ್ವ್ ಇದ್ರು. ಹಾಗಾಗಿ ನಿಮ್ಗೆ ಐಎಎಸ್ ಕೊಡೋಕೆ ಆಗಲ್ಲ ಕಣ್ರೀ, ಐಎಫ್ಎಸ್ ಅಥವಾ ಐಸಿಎಸ್ ತಗೋಳಿ ಅಂತ‌ ಹೇಳೋಕೆ ಯುಪಿಎಸ್ಸಿಗೆ ಆಗ್ಲಿಲ್ಲ.

ಮಲ್ಹೋತ್ರಾ ಅವರನ್ನು ಐಎಎಸ್ ಆಫೀಸರ್ ಆಗಿ ನೇಮಿಸಿ, ಆಗಿನ ಮದ್ರಾಸ್ ರಾಜ್ಯಕ್ಕೆ ಪೋಸ್ಟಿಂಗ್ ನೀಡಿದ್ರು.‌ ಅನ್ನಾ ರಾಜಮ್ ಮಲ್ಹೋತ್ರಾ ಆಗಿನ ಮುಖ್ಯಮಂತ್ರಿ ಸಿ. ರಾಜಗೋಪಾಲಾಚಾರಿ ಅವರ ಕೆಳಗಡೆ ಕೆಲಸ ಮಾಡಿದ್ರು . 7 ಮುಖ್ಯಮಂತ್ರಿಗಳ‌ ಕೈ ಕೆಳಗೆ ಕೆಲಸ ಮಾಡಿದ ಅನುಭವ ಇವರದ್ದು ‌.‌ರಾಜೀವ್ ಗಾಂಧಿ ಮತ್ತು ಇಂದಿರಾಗಾಂಧಿ ಅವರನ್ನು ಕೂಡ ತುಂಬಾ ಹತ್ತಿರದಿಂದ ಬಲ್ಲವರಾಗಿದ್ರು.

ಇನ್ನು ಇವರ ಅಪ್ಪ,‌ಅಮ್ಮನ ಬಗ್ಗೆ ಮೊದಲೇ ಹೇಳಾಗಿದೆ‌.‌ ಇಷ್ಟೆಲ್ಲಾ ಹೇಳಿದ್ಮೇಲೆ ಇವ್ರ ದಾಂಪತ್ಯದ ಬಗ್ಗೆ ಹೇಳ್ದೆ ಇದ್ರೆ ಹೇಗೆ..? ಇವರು ಮದ್ವೆ ಆಗಿದ್ದು ಆರ್. ಎನ್ ಮಲ್ಹೋತ್ರಾ ಅವರನ್ನು. ಆರ್.ಎನ್.ಎಂ ಅವರು ಆರ್ ಬಿ ಐನ 17ನೇ ಗವರ್ನರ್. ಅನ್ನಾ ಅವರ ಐಎಎಸ್ ಬ್ಯಾಚ್ ಮೇಟ್ ಕೂಡ ಹೌದು. ಮಲ್ಹೋತ್ರಾ ಅವರನ್ನು ಮದ್ವೆ ಆದ್ಮೇಲೆ ಅನ್ನಾ ರಾಜಮ್ ಜಾರ್ಜ್ ಅನ್ನಾ ರಾಜಮ್ ಮಲ್ಹೋತ್ರಾ ಆದ್ರು.

ಸ್ವತಂತ್ರ ಭಾರತದ ಮೊದಲ ಮಹಿಳಾ ಐಎಎಸ್ ಅಧಿಕಾರಿ ಅನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದ ಈ ಅನ್ನಾ ರಾಜಮ್ ಮಲ್ಹೋತ್ರಾ ಇತ್ತೀಚೆಗಷ್ಟೇ, ಅಂದ್ರೆ 2018ರ ಸೆಪ್ಟೆಂಬರ್ 17 ರಂದು ನಮ್ಮನ್ನೆಲ್ಲಾ  ಅಗಲಿದ್ದಾರೆ.

Exit mobile version