Site icon PowerTV

ಮೀ ಟೂಗೆ ಹರ್ಷಿಕಾ ಎಂಟ್ರಿ..!

ಸ್ಯಾಂಡಲ್ ವುಡ್ ನಲ್ಲಿ ಮೀ ಟೂ ಚಳವಳಿ ಜೋರಾಗಿ ಸದ್ದು ಮಾಡ್ತಿದೆ. ನಟಿ ಶ್ರುತಿ ಹರಿಹರನ್ ನಟ ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದೇ ತಡ, ಒಬ್ಬೊಬ್ರಾಗಿ ಚಳವಳಿಗೆ ಧುಮುಕ್ತಿದ್ದಾರೆ..! ಇದೀಗ ಹರ್ಷಿಕಾ ಪೂಣಚ್ಚ ಸರದಿ. ಹರ್ಷಿಕಾ ಅರ್ಜುನ್ ಸರ್ಜಾ ಪರ ನಿಂತಿದ್ದಾರೆ. ಚಿತ್ರರಂಗದಲ್ಲಿ ಎಲ್ರೂ ಕೆಟ್ಟವರಿಲ್ಲ. ಮೀ ಟೂ ಮೂಲಕ ನಟಿಯರು ಅಂಡ್ವಾಂಟೇಜ್ ತಗೋತ್ತಿದ್ದಾರೆ. ಅನ್ನ ನೀರು ಕೊಟ್ಟ ಚಿತ್ರರಂಗದ ಮರ್ಯಾದೆ ಇದ್ರಿಂದ ಹಾಳಾಗಿದೆ” ಅಂತ ಹರ್ಷಿಕಾ ಟ್ವೀಟ್ ಮಾಡಿದ್ದಾರೆ.
ಎ ಲಿಸ್ಟ್ ನಲ್ಲಿರೋ ಸ್ಟಾರ್ ಗಳ ಮೇಲೆ ಅಪಾದನೆ ಮಾಡೋ ತಾಕತ್ತು ಇದ್ಯಾ? 10-12 ವರ್ಷದ ಹಿಂದಿನ ಘಟನೆಗಳನ್ನು ಈಗ ಹೇಳ್ತಿರೋದು ಯಾಕೆ? ಒಂದು ಫ್ಯಾಮಿಲಿಯ ಮಾನ, ನೆಮ್ಮದಿ ಹಾಳು ಮಾಡೋ ಯತ್ನ ನಡೆಸುತ್ತಿರೋದೇಕೆ ಅಂತ ಪ್ರಶ್ನಿಸಿರೋ ಹರ್ಷಿಕಾ #We Too ಶುರುಮಾಡಿ ಅಂತ ಪುರುಷರಲ್ಲಿ ಮನವಿ ಮಾಡಿದ್ದಾರೆ.
Exit mobile version