Home ರಾಜ್ಯ ಕೇರಳದಂತೆಯೇ 10 ವರ್ಷದ ಹಿಂದೆ ಮಂಗಳೂರಲ್ಲಿ ಸಂಭವಿಸಿತ್ತು ಭಾರೀ ವಿಮಾನ ದುರಂತ!

ಕೇರಳದಂತೆಯೇ 10 ವರ್ಷದ ಹಿಂದೆ ಮಂಗಳೂರಲ್ಲಿ ಸಂಭವಿಸಿತ್ತು ಭಾರೀ ವಿಮಾನ ದುರಂತ!

ಬೆಂಗಳೂರು : ನಿನ್ನೆ (ಶುಕ್ರವಾರ) ರಾತ್ರಿ ಕೇರಳದ ಕರಿಪುರ್ ವಿಮಾನ ನಿಲ್ದಾಣದಲ್ಲಿ  ವಿಮಾನ ಅಪಘಾತ ಸಂಭವಿಸಿದೆ. ಇಂತಹದ್ದೇ ಭಾರೀ ವಿಮಾನ ದುರಂತ 10 ವರ್ಷದ ಹಿಂದೆ  ಮಂಗಳೂರಲ್ಲಿ ಸಂಭವಿಸಿತ್ತು! ಅಂದು ನಡಿದ್ದ ವಿಮಾನ ಅವಘಢ ಇಡೀ ವಿಶ್ವವನ್ನು ಬೆಚ್ಚಿಬೀಳಿಸಿತ್ತು. ಆ ದುರಂತ ನಡೆದು ಹೋಗಿ 10 ವರ್ಷವಾಗಿದೆ. ಇದೀಗ ಅದೇ ರೀತಿಯ ದುರಂತ ಕೇರಳದಲ್ಲಿ ಘಟಿಸಿದೆ.

2010 ಮೇ 22ರಂದು ಬೆಳಗ್ಗೆ 6.30ರ ಸುಮಾರಿಗೆ ಬಜ್ಪೆ ಸಮೀಪದ ಕೆಂಜಾರು ರನ್ವೇ ಬಳಿ, ಏರ್​ ಇಂಡಿಯಾ ಐಎಕ್ಸ್​ 812 ವಿಮಾನ ಅವಘಡಕ್ಕೀಡಾಗಿತ್ತು. ದುಬೈನಿಂದ ಬಂದಿದ್ದ ಆ ವಿಮಾನದಲ್ಲಿ ಕ್ಯಾಪ್ಟನ್, ಸಹ ಪೈಲಟ್ ಸೇರಿ 166 ಮಂದಿ ಇದ್ದರು. 158 ಮಂದಿ ಮೃತಪಟ್ಟಿದ್ದರು. 8 ಮಂದಿ ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದರು.             

ಈ ಹಿಂದೆ ನಡೆದ ಇತರೆ ಭಾರಿ ದುರಂತಗಳು

1978 ಜನವರಿ 01 ರಂದು ಏರ್ ಇಂಡಿಯಾ ವಿಮಾನ ಮುಂಬಯಿ ಏರ್​ಪೋರ್ಟ್​ನಲ್ಲಿ ಪತನಗೊಂಡಿತ್ತು. ಆ ದುರಂತದಲ್ಲಿ 213 ಮಂದಿ ಸಾವನ್ನಪ್ಪಿದ್ದರು.

1982 ಜೂನ್​ 21ರಂದು ಮುಂಬೈ ಏರ್ಪೋರ್ಟ್​ ನಲ್ಲಿ ಏರ್​ ಇಂಡಿಯಾ ವಿಮಾನ ಅಪಘಾತಕ್ಕೀಡಾಗಿತ್ತು. ಆ ಅವಘಡದಲ್ಲಿ 17 ಮಂದಿ ಮೃತಪಟ್ಟಿದ್ದರು. 94 ಮಂದಿಗೆ ಗಾಯಗಳಾಗಿದ್ದವು.

1996 ನವೆಂಬರ್ 12ರಂದು ಹರಿಯಾಣದ ಚರ್ಕಿದಾದ್ರಿ ಬಳಿ ವಾಯುಮಾರ್ಗದಲ್ಲೇ ಸೌದಿ ಅರೇಬಿಯನ್ ಏರ್​ಲೈನ್ಸ್ ಮತ್ತು ಖಜಿಕಿಸ್ತಾನ್​ ಏರ್​ಲೈನ್ಸ್​ ವಿಮಾನಗಳು ಡಿಕ್ಕಿಯಾಗಿದ್ದವು. 349 ಮಂದಿ ಈ ದುರಂತದಲ್ಲಿ ಮೃತಪಟ್ಟಿದ್ದರು.

2000ನೇ ಇಸವಿ ಜುಲೈ 17 ರಂದು ಬಿಹಾರದ ಪಾಟ್ನಾದಲ್ಲಿ ಅಲಯನ್ಸ್ ಏರ್ ವಿಮಾನ ಪತನಗೊಂಡಿತ್ತು.

LEAVE A REPLY

Please enter your comment!
Please enter your name here

- Advertisment -

Most Popular

5 ವರ್ಷದ ಬಾಲಕಿ ಕಾಣೆ

ಬೆಂಗಳೂರು : ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ 5 ವರ್ಷದ ಬಾಲಕಿ ಕಾಣೆಯಾಗಿದ್ದಾಳೆ. ಲೋಕಿತ ಕೆ.ಮರನ್ ಕಾಣೆಯಾಗಿರುವ ಬಾಲಕಿ‌. ಈಕೆ ತನ್ನ ತಾತನ ಜೊತೆ ಸೆ.18 ರಂದು ಮನೆಯಿಂದ ತೆರಳಿದ್ದಳು. ಮೆಜೆಸ್ಟಿಕ್ ನಿಲ್ದಾಣದಲ್ಲಿ...

ಅಕ್ಕ ಗೌರಿ ಲಂಕೇಶ್​ರನ್ನು ನೆನೆದು ಕಣ್ಣೀರಿಟ್ಟ ಇಂದ್ರಜಿತ್ ಲಂಕೇಶ್..!

ಬೆಂಗಳೂರು : ಸ್ಯಾಂಡಲ್​​ವುಡ್​ ಡ್ರಗ್ಸ್​ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಸಿಸಿಬಿ ವಿಚಾರಣೆ ಎದುರಿಸಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಮತ್ತೊಮ್ಮೆ ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗುತ್ತಿದ್ದಾರೆ.  ಇಂದು ಸಿಸಿಬಿ ವಿಚಾರಣೆಗೆ ಹೋಗುವ...

ಸ್ಯಾಂಡಲ್​​ವುಡ್​​​​​ನಲ್ಲಿ ಡ್ರಗ್​ ಮಾಫಿಯಾ : ಇಂದು ಸಿಸಿಬಿಯಿಂದ ನಟಿ ರಾಗಿಣಿ ವಿಚಾರಣೆ

ಬೆಂಗಳೂರು :  ಸ್ಯಾಂಡಲ್​​​​ವುಡ್​​ನಲ್ಲಿ ಡ್ರಗ್​​ ಮಾಫಿಯಾದ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಾ ಇದೆ. ಚಂದನವನಕ್ಕೆ ಮಾದಕ ಜಾಲ ಹಬ್ಬಿದೆಯೇ ಅಥವಾ ಇಲ್ಲವೇ ಅನ್ನೋದು ಸದ್ಯದ ಗಾಂಧಿನಗರದ ಹಾಟ್ ಸುದ್ದಿ. ಇದಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ...

ಕೊರೋನಾದಿಂದ ಮಾಜಿ ಶಾಸಕ ಅಪ್ಪಾಜಿ ಗೌಡ ನಿಧನ

ಶಿವಮೊಗ್ಗ : ಭದ್ರಾವತಿಯ ಜೆಡಿಎಸ್ ನ ಮಾಜಿ ಶಾಸಕ ಅಪ್ಪಾಜಿಗೌಡ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಕೊರೋನಾ ಸೋಂಕಿಗೆ ಒಳಗಾಗಿದ್ದ ಅವರು,  ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅಪ್ಪಾಜಿಗೌಡರಿಗೆ 69 ವರ್ಷ ವಯಸ್ಸಾಗಿತ್ತು. ಪತ್ನಿ...

Recent Comments