Homeರಾಜ್ಯಬೆಂಗಳೂರುಸಾಲ ಮರುಪಾವತಿಸದ ಹಿನ್ನೆಲೆ ಬ್ಯಾಂಕ್ ಅಧಿಕಾರಿಗಳಿಂದ 200 ಎಕರೆ ಕಾಫಿ ತೋಟ ಸಿಜ್

ಸಾಲ ಮರುಪಾವತಿಸದ ಹಿನ್ನೆಲೆ ಬ್ಯಾಂಕ್ ಅಧಿಕಾರಿಗಳಿಂದ 200 ಎಕರೆ ಕಾಫಿ ತೋಟ ಸಿಜ್

ಚಿಕ್ಕಮಗಳೂರು: 22 ಕೋಟಿ ರೂಪಾಯಿ ಸಾಲವನ್ನು ವಸೂಲಿ ಮಾಡುವ ಸಲುವಾಗಿ ಯೂನಿಯನ್​ ಬ್ಯಾಂಕ್​ನ​ ಅಧಿಕಾರಿಗಳು ಸುಮಾರು 200 ಎಕರೆ ಕಾಫಿ ತೋಟವನ್ನು ಸೀಜ್​​ ಮಾಡಿದ ಘಟನೆ ಚಿಕ್ಕಮಗಳೂರು ತಾಲೂಕಿನ ಹಿರೇಕೊಳಲೆ ಎಂಬಲ್ಲಿ ನಡೆದಿದೆ

ವಾಟೇಖಾನ್​ ಕಾಫಿ ಎಸ್ಟೇಟ್​ ಮಾಲೀಕ ರಮೇಶ್​ ರಾವ್​ ಎಂಬುವವರು ಯೂನಿಯನ್​ ಬ್ಯಾಂಕ್​ನಿಂದ ಸಾಲ ಪಡೆದಿದ್ದಾರೆ. ಸುಮಾರು 22 ಕೋಟಿ ರೂಪಾಯಿ ಬಾಕಿ ಇದ್ದು, ಅದನ್ನು ಮರುಪಾವತಿ ಮಾಡಿಲ್ಲ ಅನ್ನೋ ಆರೋಪ ಇದೆ. ಅದೇ ಕಾರಣಕ್ಕೆ ತಮ್ಮ ಸಾಲವನ್ನು ಹಿಂಪಡೆಯುವ ಸಲುವಾಗಿ ಪೊಲೀಸರ ಸಮೇತ ಬಂದ ಅಧಿಕಾರಿಗಳು ತೋಟವನ್ನ ಸೀಜ್​ ಮಾಡಿಸಿದ್ದಾರೆತೋಟದಲ್ಲಿ 50 ಕ್ಕೂ ಹೆಚ್ಚು ಕಾರ್ಮಿಕರಿದ್ದು, ಮಾಲೀಕ ರಮೇಶ್​ರಾವ್​ ಕಾರ್ಮಿಕರಿಗೂ ಸಂಬಳ ನೀಡದೇ ಅವರ ಬಳಿಯೂ ಲಕ್ಷಾಂತರ  ರೂಪಾಯಿ ಬಾಕಿ ಉಳಿಸಿಕೊಂಡಿದ್ದಾರೆ ಅಂತಾ ಹೇಳಲಾಗಿದೆ. ಇತ್ತ ಬ್ಯಾಂಕ್​ ಅಧಿಕಾರಿಗಳು ಕಾರ್ಮಿಕರನ್ನು ಹೊರಹಾಕಿ ಎಸ್ಟೇಟ್​ ಸೀಜ್​ ಮಾಡಲು ಮುಂದಾಗಿದ್ದಾರೆ. ದಯವಿಟ್ಟು, ನಮ್ಮನ್ನು ಹೊರ ಕಳಿಸಬೇಡಿ ಎಂದು ಕಾರ್ಮಿಕರು ಅಂಗಲಾಚುತ್ತಿದ್ದು, ನಾವು ಈ ಸ್ಥಳವನ್ನು ಬಿಟ್ಟು ಹೋಗಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದಾರೆ. ಸ್ಥಳದಲ್ಲಿ ಬಿಗಿ ಪೊಲೀಸ್​ ಬಂದೋಬಸ್ತ್​ ಹಾಕಲಾಗಿದೆ.

ಸಚಿನ್ ಶೆಟ್ಟಿ

LEAVE A REPLY

Please enter your comment!
Please enter your name here

- Advertisment -

Most Popular

Recent Comments