Home ದೇಶ-ವಿದೇಶ ಶೀಘ್ರದಲ್ಲೇ 20 ರೂ ನಾಣ್ಯ..!

ಶೀಘ್ರದಲ್ಲೇ 20 ರೂ ನಾಣ್ಯ..!

ನವದೆಹಲಿ: 1,2,5,10,20 ರೂ. ಮುಖ ಬೆಲೆಯ ಹೊಸ ನಾಣ್ಯಗಳನ್ನು ಕೇಂದ್ರ ಸರಕಾರ ಬಿಡುಗಡೆ ಮಾಡಲಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಹೇಳಿದ್ರು.

ಈಗಾಗಲೇ 20 ರೂ. ಹೊರತುಪಡಿಸಿ ಉಳಿದ ಮುಖಬೆಲೆಯ ಹಳೆಯ ನಾಣ್ಯಗಳು ಚಲಾವಣೆಯಲ್ಲಿವೆ. ಆ ಹೊಸ ನಾಣ್ಯಗಳೊಂದಿಗೆ 20 ರೂ.ಮುಖಬೆಲೆಯ ನಾಣ್ಯ ಕೂಡ ಸಾರ್ವಜನಿಕರಿಗೆ ಸದ್ಯದಲ್ಲೇ ಲಭ್ಯವಾಗಲಿದೆ. ಹೊಸ ನಾಣ್ಯಗಳು ದೃಷ್ಟಿಹೀನರಿಗೂ ಗುರುತಿಸಲು ಸಾಧ್ಯವಾಗುವ ರೀತಿಯಲ್ಲಿವೆ ಎಂದು ತಿಳಿದುಬಂದಿದೆ.

20 ರೂಪಾಯಿಯ ಹೊಸ ನಾಣ್ಯ 27 ಮೀ.ಮೀ ಇರಲಿದೆ. ಶೇ.65 ತಾಮ್ರ, ಶೇ.15 ಸತು, ಶೇ.20 ನಿಕ್ಕಲ್​ ಬಳಸಿ ನಾಣ್ಯದ ಹೊರ ಉಂಗುರವನ್ನು ಮತ್ತು ನಾಣ್ಯದ ಮಧ್ಯಭಾಗವನ್ನು ತಾಮ್ರ ಶೇ.75, ಸತು ಶೇ.20 ಮತ್ತು ಶೇ.05 ರಷ್ಟು ನಿಕ್ಕಲ್​  ಬಳಸಿ ತಯಾರಿಸಲಾಗ್ತದೆ.

LEAVE A REPLY

Please enter your comment!
Please enter your name here

- Advertisment -

Most Popular

ಅಲಹಬಾದ್​ ಹೈಕೋರ್ಟ್ ನಿಗಾದಲ್ಲಿ ಹತ್ರಾಸ್​ ಗ್ಯಾಂಗ್ ರೇಪ್​ ಕೇಸ್ ತನಿಖೆಗೆ ಸುಪ್ರೀಂ ಆದೇಶ

ನವದೆಹಲಿ : ಉತ್ತರ ಪ್ರದೇಶ ಹತ್ರಾಸ್​​​​ ಗ್ಯಾಂಗ್​ ರೇಪ್​​ ಪ್ರಕರಣದ ತನಿಖೆ ಅಲಹಬಾದ್​ ಹೈಕೋರ್ಟ್​ ನಿಗಾದಲ್ಲಿ ನಡೆಯಬೇಕೆಂದು ಸುಪ್ರೀಂ ಕೋರ್ಟ್​ ಆದೇಶಿಸಿದೆ. ಸದ್ಯ ಸಿಬಿಐ ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದು, ತನಿಖಾ ತಂಡದಲ್ಲಿರುವ ಅಧಿಕಾರಿಗಳನ್ನು ರಾಜ್ಯದಿಂದ...

ಡಿ.ಬಾಸ್​​ಗಾಗಿ ಕನ್ನಡ ಕಲಿತ ಜಗಮಪತಿ ಬಾಬು..!

ಸಾಲ್ಟ್ ಅಂಡ್ ಪೆಪ್ಪರ್ ಲುಕ್​ನಲ್ಲಿ ಸೌತ್​ನಲ್ಲಿ ಸಂಚಲನ ಸೃಷ್ಠಿಸಿರೋ ಜಗಪತಿ ಬಾಬು, ಮತ್ತೊಂದು ನೂತನ ದಾಖಲೆ ಬರೆದಿದ್ದಾರೆ. ಅದೂ ಡಿ ಬಾಸ್ ದರ್ಶನ್​ಗಾಗಿ ಅನ್ನೋದು ವಿಶೇಷ. ಇಷ್ಟಕ್ಕೂ ಮೋಸ್ಡ್ ಡಿಮ್ಯಾಂಡಿಂಗ್ ಜಗಪತಿ ಬಾಬು...

ಅಪಮಾನದಿಂದ ಶೋಕ್ದಾರ್ ಮುಕ್ತ.. ನೋ ಮಿಸ್ಟೇಕ್..?!

ನೈಟ್ ಸಫಾರಿಯಿಂದ ಹೊಸ ವಿವಾದದಲ್ಲಿ ಸಿಲುಕಿಕೊಂಡಿದ್ದ ಸ್ಯಾಂಡಲ್​ವುಡ್​ನ ಶೋಕ್ದಾರ್, ಟಾಕ್ ಆಫ್ ದ ಟೌನ್ ಆಗಿದ್ರು. ಆದ್ರೀಗ ಅರಣ್ಯಾಧಿಕಾರಿಗಳು ಆ ಕೇಸ್​ನ ಟ್ರೇಸ್ ಮಾಡಿದ್ದಾರೆ. ಅವಮಾನ ಹಾಗೂ ಅಪಮಾನಗಳಿಂದ ಬಜಾರ್ ಹುಡ್ಗನಿಗೆ ಮುಕ್ತಿ...

ಡಿಕೆಶಿ ಗೂಂಡಾ ರಾಜಕಾರಣ ನಡೆಯುವುದಿಲ್ಲ : ಶೋಭಾ ಕರಂದ್ಲಾಜೆ

ಮೈಸೂರು :  ಶಿರಾ, ಆರ್ ಆರ್​ ನಗರ ವಿಧನಾಸಭಾ ಉಪ ಚುನಾವಣೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ . ಕೆ ಶಿವಕುಮಾರ್​ ಅವರ ಗೂಂಡಾ ರಾಜಕಾರಣ  ನಡೆಯುವುದಿಲ್ಲ ಅಂತ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ...

Recent Comments