109 ಗಂಟೆಗೂ ಹೆಚ್ಚು ಕಾಲ ಬೋರ್​ವೆಲ್​ ಒಳಗೆ ಸಿಲುಕಿದ್ದ ಬಾಲಕ ಪಾರು..!

0
127

ಚಂಡೀಗಡ: 150 ಫೀಟ್ ಆಳದ ಬೋರ್​ವೆಲ್​ಗೆ ಬಿದ್ದ ಬಾಲಕನನ್ನು 109 ಗಂಟೆಗಳ ನಂತರ ಸುರಕ್ಷಿತವಾಗಿ ಹೊರತೆಗೆಯಲಾಗಿದೆ. ಗುರುವಾರದಂದು ಪಂಜಾಬ್​ನ ಸಂಗ್ರುಪುರ್​ ಜಿಲ್ಲೆಯ ಭಗವಾನ್​ಪುರ್ ಗ್ರಾಮದದಲ್ಲಿ ಬಟ್ಟೆ ಮುಚ್ಚಿದ ಸ್ಥಿತಿಯಲ್ಲಿದ್ದ ಬೋರ್​ವೆಲ್​ಗೆ ​ಮಗು ಬಿದ್ದಿತ್ತು. 7 ಇಂಚು ಅಗಲದ ಬೋರ್​ವೆಲ್​ನ್ನು ಬಟ್ಟೆ ಮುಚ್ಚಿಡಲಾಗಿತ್ತು. ತಿಳಿಯದೆ ಬಂದ ಮಗು ಬೋರ್​​ವೆಲ್​ಗೆ ಬಿದ್ದಿತ್ತು.

ಫತೇವೀರ್ ಸಿಂಗ್​ನ್ನು ರಕ್ಷಿಸಲು ಆತನ ತಾಯಿ ಪ್ರಯತ್ನಿಸಿದರೂ ಮಗನನ್ನು ರಕ್ಷಿಸಲು ಅವರು ವಿಫಲರಾಗಿದ್ದರು. 5 ದಿನಗಳ ರಕ್ಷಣಾ ಕಾರ್ಯಾಚರಣೆ ನಡೆಸಿದ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ಇಂದು ಬೆಳಗ್ಗೆ 5 ಗಂಟೆಗೆ ಬಾಲಕನನನ್ನು ಹೊರ ತೆಗೆಯಲಾಗಿದೆ. ಗ್ರಾಮದಲ್ಲಿ ಆಸ್ಪತ್ರೆ ಇರದ ಕಾರಣ 140 ಕಿಲೋ ಮೀಟರ್ ಸಂಚರಿಸಿ ಬಾಲಕನನ್ನು ದೂರದ ಆಸ್ಪತ್ರೆಗೆ ಸೇರಿಸಲಾಗಿದೆ.

LEAVE A REPLY

Please enter your comment!
Please enter your name here