ಇಬ್ಬರು ಜೈಷ್​ ಉಗ್ರರನ್ನು ಹೊಡೆದುರುಳಿಸಿದ ಯೋಧರು..!

0
306

ನವದೆಹಲಿ: ಜಮ್ಮುಕಾಶ್ಮೀರದ ಶೋಪಿಯಾನ್​ನಲ್ಲಿ ಇಂದು ಬೆಳಗಿನ ಜಾವ ನಡೆದಿರುವ ಗುಂಡಿನ ಚಕಮಕಿಯಲ್ಲಿ ಇಬ್ಬರು ಜೈಷ್​ ಉಗ್ರರರನ್ನು ಯೋಧರು ಹೊಡೆದುರುಳಿಸಿದ್ದಾರೆ. ಗಡಿನಿಯಂತ್ರಣ ರೇಖೆಯಲ್ಲಿ ಜೈಷ್​ ಉಗ್ರ ನೆಲೆಗಳ ಮೇಲೆ ಭಾರತ ಏರ್​ ಸ್ಟ್ರೈಕ್​ ನಡೆಸಿರುವ ಬೆನ್ನಲ್ಲೇ ಪಾಕ್​ ಮತ್ತೊಮ್ಮೆ ಕದನ ವಿರಾಮ ಉಲ್ಲಂಘಿಸಿದೆ.

ಉಗ್ರರ ಇರುವಿಕೆಯ ಖಚಿತ ಮಾಹಿತಿ ಮೇರೆಗೆ ಶೋಪಿಯಾನ್​ನ ಮೀಮೆಂದರ್ ಪ್ರದೇಶದಲ್ಲಿ ಭದ್ರತಾ ಪಡೆ ಕಾರ್ಯಾಚರಣೆ ನಡೆಸಿತ್ತು. ಉಗ್ರರು ಗುಂಡಿನ ದಾಳಿ ನಡೆಸಿದಾಗ ಸೇನೆ ಪ್ರತಿದಾಳಿ ನಡೆಸಿದೆ.

ಜೈಷ್​ ಉಗ್ರರ ತರಬೇತಿ ಕೇಂದ್ರವಿರುವ ಬಾಲ್​ಕೋಟ್​ ಮೇಲೆ ಏರ್​ ಸ್ಟ್ರೈಕ್​ ದಾಳಿ ನಡೆದ ಮರುದಿನವೇ ಗಡಿಯಲ್ಲಿದ ಮತ್ತೆ ಗುಂಡಿನ ಚಕಮಕಿ ನಡೆದಿದೆ. ಏರ್ ಸ್ಟ್ರೈಕ್ ದಾಳಿಯಲ್ಲಿ 300ಕ್ಕೂ ಹೆಚ್ಚು ಉಗ್ರರು ಸಾವನ್ನಪ್ಪಿದ್ದಾರೆ. ಫೆಬ್ರವರಿ 14ರಂದು ಜೈಷ್​ ಉಗ್ರರು ಸಿಪಿಆರ್​ಎಫ್ ಯೋಧರ ಸೇನಾ ವಾಹನದ ಮೇಲೆ ದಾಳಿ ನಡೆಸಿ 40 ಯೋಧರು ಹುತಾತ್ಮರಾಗಿದ್ದರು.  ಈ ದಾಳಿ ನಂತರ ಪಾಕ್​ ಮತ್ತು ಭಾರತದ ನಡುವಿನ ಸಂಬಂಧ ಇನ್ನಷ್ಟು ಬಿಗಡಾಯಿಸಿದೆ.

LEAVE A REPLY

Please enter your comment!
Please enter your name here