4 ಬಾರಿ ಮೇಯರ್ ಆದ ದೇಶದ ಮೊದಲ ವ್ಯಕ್ತಿ ಸಂಭಾಜಿ ಇನ್ನಿಲ್ಲ

0
305

ಚಿಕ್ಕೋಡಿ: ಮಾಜಿ ಶಾಸಕ ಸಂಭಾಜಿ ಪಾಟೀಲ್ ನಿನ್ನೆ ರಾತ್ರಿ 8.45ಕ್ಕೆ ವಿಧಿವಶರಾಗಿದ್ದಾರೆ. ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ 66 ವರ್ಷದ ಸಂಭಾಜಿ ಪಾಟೀಲ್‌, ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ. ಬೆಳಗಾವಿ ದಕ್ಷಿಣ ಕ್ಷೇತ್ರದಿಂದ ಒಮ್ಮೆ ಶಾಸಕರಾಗಿ ಆಯ್ಕೆಯಾಗಿದ್ದ ಸಂಭಾಜಿ ಪಾಟೀಲ್, ಬೆಳಗಾವಿ ಮಹಾನಗರ ಪಾಲಿಕೆಗೆ ನಾಲ್ಕು ಬಾರಿ ಮೇಯರ್ ಆಗಿ ಕೆಲಸ ಮಾಡಿದ್ದರು. 1990, 1992, 1999 ಮತ್ತು 2003ರಲ್ಲಿ ಅವರು ಬೆಳಗಾವಿ ಪಾಲಿಕೆಯ ಆಡಳಿತದ ಚುಕ್ಕಾಣಿ ಹಿಡಿದಿದ್ದರು. ನಾಲ್ಕು ಬಾರಿ ಮೇಯರ್ ಆದ ದೇಶದ ಮೊದಲ ವ್ಯಕ್ತಿ ಎಂಬ ದಾಖಲೆ ಅವರ ಹೆಸರಲ್ಲೇ ಇದೆ.

LEAVE A REPLY

Please enter your comment!
Please enter your name here