Home ದೇಶ-ವಿದೇಶ ದೇಶದಲ್ಲಿ ಕಳೆದ 24 ಗಂಟೆಯಲ್ಲಿ 194 ಜನ ಸಾವು : 6 ಸಾವಿರಕ್ಕೂ ಹೆಚ್ಚು ಜನರಲ್ಲಿ...

ದೇಶದಲ್ಲಿ ಕಳೆದ 24 ಗಂಟೆಯಲ್ಲಿ 194 ಜನ ಸಾವು : 6 ಸಾವಿರಕ್ಕೂ ಹೆಚ್ಚು ಜನರಲ್ಲಿ ಸೋಂಕು ಪತ್ತೆ

ನವದೆಹಲಿ: ಇತ್ತೀಚೆಗೆ  ಪ್ರತಿದಿನ ದೇಶದಲ್ಲಿ 6 ಸಾವಿರದಷ್ಟು ಜನ ಸೋಂಕಿತರು ಹೆಚ್ಚಾಗುತ್ತಲೇ ಇದ್ದಾರೆ. ಇಂದು ಮತ್ತೆ ಕೊರೋನಾ ಸೋಂಕಿತರ ಸಂಖ್ಯೆ ಏರಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 6,566 ಜನರಲ್ಲಿ ಸೋಂಕು ದೃಢಪಟ್ಟಿದ್ದು, ಈವರೆಗೆ ಒಟ್ಟು 1,58,333 ಜನರು ಸೋಂಕಿಗೆ ತುತ್ತಾಗಿದ್ದಾರೆ. ಕಳೆದ 24 ಗಂಟೆಯಲ್ಲಿ 194 ಜನರು ಸೋಂಕಿನಿಂದ ಮೃತಪಟ್ಟಿದ್ದು, ಒಟ್ಟು 4,531 ಸೋಂಕಿತರು ಸಾವನ್ನಪ್ಪಿದ್ದಾರೆ. ಇವೆಲ್ಲದರ ನಡುವೆ 67,692 ಜನ ಸೋಂಕಿತರು ಚೇತರಿಸಿಕೊಂಡಿದ್ದಾರೆ.

ದೇಶದ ಸೋಂಕಿತರ ಪಟ್ಟಿಯಲ್ಲಿ ಮುಂಚೂಣಿಯಲ್ಲಿರುವ ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ 56,948 ಕ್ಕೆ ಏರಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 2,190 ಜನ ಸೋಂಕಿಗೆ ತುತ್ತಾಗಿದ್ದಾರೆ. ಈವರೆಗೂ ಮಹಾರಾಷ್ಟ್ರದಲ್ಲಿ ಸೋಂಕಿನಿಂದ 1,897 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ.

ಇನ್ನು ಸೋಂಕಿತರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ತಮಿಳುನಾಡಿನಲ್ಲಿ ಕಳೆದ 24 ಗಂಟೆಯಲ್ಲಿ 817 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಒಟ್ಟು 18,545 ಜನರಲ್ಲಿ ಸೋಂಕು ದೃಢಪಟ್ಟಿದೆ. ಇನ್ನು ಸೋಂಕಿನಿಂದ 6 ಮಂದಿ ಸಾವನ್ನಪ್ಪಿದ್ದು, ಮೃತಪಟ್ಟವರ ಸಂಖ್ಯೆಯೂ 133 ಕ್ಕೆ ಏರಿಕೆಯಾಗಿದೆ.

ದೆಹಲಿಯಲ್ಲಿ ಮತ್ತೆ ಸೋಂಕಿತರ ಸಂಖ್ಯೆ ಏರಿಕೆಯಾಗಿದ್ದು, ಸೋಂಕಿತರ ಸಂಖ್ಯೆಯ ಏರಿಕೆಯಲ್ಲಿ ಗುಜರಾತ್ ಹಾಗೂ ದೆಹಲಿ ಮಧ್ಯೆ ಪೈಪೋಟಿ ನಡೆಯುವಂತಾಗಿದೆ. ದೆಹಲಿಯಲ್ಲಿ ಒಂದೇ ದಿನದಲ್ಲಿ 792 ರಷ್ಟು ಸೋಂಕಿತರು ಪತ್ತೆಯಾಗಿದ್ದು, ಒಟ್ಟು 15,257 ಜನರಲ್ಲಿ ಸೋಂಕು ದೃಢಪಟ್ಟಿದೆ. ಇನ್ನು ಈವರೆಗೆ ಸೋಂಕಿನಿಂದ ಮೃತಪಟ್ಟವರ ಸMಖ್ಯೆಯೂ ಏರಿಕೆಯಾಗಿದ್ದು, ಒಟ್ಟು 303 ಜನ ಸೋಂಕಿತರು ಸಾವನ್ನಪ್ಪಿದ್ದಾರೆ.

ದೇಶದ ಸೋಂಕಿತರ ಪಟ್ಟಿಯಲ್ಲಿ ಗುಜರಾತ್ ಮತ್ತೆ ನಾಲ್ಕನೇ ಸ್ಥಾನಕ್ಕೆ ಇಳಿದಿದ್ದು, ದೆಹಲಿಯಲ್ಲಿ ಪತ್ತೆಯಾದ ಸೋಂಕಿತರಿಗಿಂತ ಸ್ವಲ್ಪ ಮಟ್ಟಿಗೆ194  ಇಳಿಕೆ ಕಂಡಿದೆ. ಈವರೆಗೂ ಒಟ್ಟು 15,195 ಜನರಲ್ಲಿ ಸೋಂಕು ದೃಢಪಟ್ಟಿದ್ದು, ಕಳೆದ 24 ಗಂಟೆಯಲ್ಲಿ 374 ಜನರಲ್ಲಿ ಸೋಂಕು ದೃಢಪಟ್ಟಿದೆ. ಇನ್ನು ಸೋಂಕಿನಿಂದ  ಒಟ್ಟು 938 ಜನ ಸಾವನ್ನಪ್ಪಿದ್ದಾರೆ. 

LEAVE A REPLY

Please enter your comment!
Please enter your name here

- Advertisment -

Most Popular

‘ನನ್ನಿಂದ ಮನೆಯವರೆಗೂ ಸೋಂಕು ತಗುಲಿದೆ ಎಂದು ತಹಶೀಲ್ದಾರ್ ಸೂಸೈಡ್’

ಚಿಕ್ಕಮಗಳೂರು: ನನ್ನಿಂದಲೇ ನನ್ನ ಮಕ್ಕಳು, ಮೊಮ್ಮಕ್ಕಳಿಗೆ ಕೊರೋನ ಬಂತು. ನನಗೆ ವಯಸ್ಸಾಗಿದ್ದು, ಬದುಕುವ ಭರವಸೆ ಕಡಿಮೆ ಇದೆ. ಆದರೆ, ನನ್ನ ಮಕ್ಕಳು, ಮೊಮ್ಮಕ್ಕಳಿಗೆ ನನ್ನ ಕಣ್ಣೆದುರೇ ಏನಾದರೂ ಆದರೆ ಅದನ್ನ ನನ್ನಿಂದ ಸಹಿಸಿಕೊಳ್ಳಲು...

ಮನೆ, ಮನೆಗೆ ಹಾಲು ವಿತರಣೆಗೆ ಪೊಲೀಸರ ಅಡ್ಡಿ..!  

ಶಿವಮೊಗ್ಗ: ನಗರ ಪ್ರದೇಶದ ಮನೆಮನೆಗಳಿಗೆ ಹಾಲು ಮಾರಾಟ ಮಾಡುವ ರೈತರಿಗೂ ಬಿಡದೇ ಪೊಲೀಸರು, ದರ್ಪ ಮೆರೆದಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.  ಹಾಲು, ತರಕಾರಿ ಮನೆಮನೆಗೆ ತೆರಳಿ ಮಾರಾಟ ಮಾಡಬಹುದು ಎಂದು ಜಿಲ್ಲಾಡಳಿತ ಸೂಚನೆ...

‘ವೈದ್ಯರ ಮೇಲೆ ಮಾರಣಾಂತಿಕ ಹಲ್ಲೆ’

ಕಲಬುರಗಿ: ಹಗಲಿರುಳು ಎನ್ನದೇ ಕೊರೊನಾ ರೋಗಿಗಳನ್ನ ಬದುಕಿಸೊದಕ್ಕೆ ದುಡಿಯುತ್ತಿರುವ ವೈದ್ಯರು ಮತ್ತು ಸಿಬ್ಬಂದಿಗಳ ಮೇಲೆ ಗ್ರಾಮಸ್ಥರು ಹಲ್ಲೆ ಮಾಡಿರುವಂತಹ ಘಟನೆ ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ಗುಂಡೇಪಲ್ಲಿ ಗ್ರಾಮದಲ್ಲಿ ನಡೆದಿದೆ.‌ ಕಳೆದ ನಾಲ್ಕು...

‘ನಾಳೆಯಿಂದ ಯಾರು ಕೂಡ ವಾಹನಗಳಲ್ಲಿ ಓಡಾಡುವಂತಿಲ್ಲ’

ಶಿವಮೊಗ್ಗ : ರಾಜ್ಯ ಸರ್ಕಾರದ ಲಾಕ್ ಡೌನ್ ಮಾರ್ಗಸೂಚಿ ಹೊರಡಿಸಿದ ಬೆನ್ನಲ್ಲೇ, ಶಿವಮೊಗ್ಗದಲ್ಲಿಯೂ ಕಟ್ಟುನಿಟ್ಟಿನ ಲಾಕ್ ಡೌನ್ ಗೆ ನಿರ್ಧಾರ ಮಾಡಲಾಗಿದೆ.  ಇಂದು ಶಿವಮೊಗ್ಗದಲ್ಲಿ ಜಿಲ್ಲೆಯ ವಿವಿಧ ಇಲಾಖಾಧಿಕಾರಿಗಳ ಮತ್ತು ವರ್ತಕರೊಂದಿಗೆ ಜಿಲ್ಲಾಡಳಿತದ ಸಭೆಯಲ್ಲಿ...

Recent Comments