Friday, September 30, 2022
Powertv Logo
Homeದೇಶಕಡಲ್ಗಳ್ಳರಿಂದ ಅಪಹರಿಸಲ್ಪಟ್ಟಿದ್ದ 19 ಮಂದಿ ಭಾರತೀಯರ ಬಿಡುಗಡೆ

ಕಡಲ್ಗಳ್ಳರಿಂದ ಅಪಹರಿಸಲ್ಪಟ್ಟಿದ್ದ 19 ಮಂದಿ ಭಾರತೀಯರ ಬಿಡುಗಡೆ

ಅಬುಜಾ: ಆಫ್ರಿಕಾದ ಪಶ್ಚಿಮ ಕರಾವಳಿಯ ಸಮುದ್ರದಿಂದ ವಾಣಿಜ್ಯ ಕಡಲ್ಗಳ್ಳರಿಂದ ಅಪಹರಿಸಲ್ಪಟ್ಟ 19 ಭಾರತೀಯರನ್ನು ಭಾನುವಾರ ಸುರಕ್ಷಿತವಾಗಿ ಬಿಡುಗಡೆ ಮಾಡಲಾಗಿದೆ.

ಕಳೆದ ಡಿಸೆಂಬರ್ 15 ರಂದು ಆಫ್ರಿಕಾದ  ಪಶ್ಚಿಮ ಕರಾವಳಿ ತೀರದಲ್ಲಿ ಪ್ರಯತ್ನಿಸುತ್ತಿದ್ದ ಚೆನ್ನೈ ಮೂಲದ ಎಂಟಿ ಡ್ಯೂಕ್ ಎಂಬ ಕಚ್ಚಾ ತೈಲ ಸಾಗಣೆ ಹಡಗನ್ನು ಹಾಗೂ ಅದರಲ್ಲಿದ್ದ 20 ಮಂದಿ ಭಾರತೀಯರನ್ನು ಆಪಹರಿಸಲಾಗಿತ್ತು.

ಭಾರತೀಯರನ್ನು ಬಿಡಿಸಲು ಭಾರತ ಸರ್ಕಾರವು  ನೈಜಿರಿಯಾ ಅಧಿಕಾರಿಗಳು ಹಾಗೂ ನೆರೆ ರಾಷ್ಟ್ರಗಳೊಂದಿಗೆ  ನಿರಂತರವಾಗಿ ಸಂಪರ್ಕದಲ್ಲಿದ್ದು, ಭಾನುವಾರ 20 ರಲ್ಲಿ 19 ಮಂದಿ ಭಾರತೀಯರನ್ನು ಬಿಡುಗಡೆ ಮಾಡಿದ್ದಾರೆ. ಒಬ್ಬ ಭಾರತೀಯ ಮೃತಪಟ್ಟಿದ್ದಾರೆ.

ಕಡಲ್ಗಳ್ಳರಿಂದ ಅಪಹರಣಕ್ಕೊಳಗಾದ 19 ಮಂದಿಯನ್ನುಬಿಡುಗಡೆ ಮಾಡಿದ್ದಕ್ಕೆ ನೈಜಿರಿಯಾದ ಅಧಿಕಾರಿಗಳಿಗೆ ಧನ್ಯವಾದ ತಿಳಿಸಿ  ನೈಜಿರಿಯಾದ ಭಾರತದ ಹೈಕಮಿಷನ್ ಟ್ವೀಟ್ ಮಾಡಿದೆ.

LEAVE A REPLY

Please enter your comment!
Please enter your name here

- Advertisment -

Most Popular

Recent Comments