Thursday, October 6, 2022
Powertv Logo
Homeದೇಶಪೊಲೀಸ್ ಠಾಣೆಯಿಂದಲೇ 185 ಮೊಬೈಲ್​ಗಳನ್ನು ಎಗರಿಸಿದ  'ಮಹಾ'ಕಳ್ಳ!

ಪೊಲೀಸ್ ಠಾಣೆಯಿಂದಲೇ 185 ಮೊಬೈಲ್​ಗಳನ್ನು ಎಗರಿಸಿದ  ‘ಮಹಾ’ಕಳ್ಳ!

ಮುಂಬೈ : ಎಲ್ಲಾದ್ರು ಕಳ್ಳತನ, ದರೋಡೆ ನಡೆದ್ರೆ ಕೂಡಲೇ ಪೊಲೀಸ್​ ಸ್ಟೇಷನ್​ಗೆ ಹೋಗಿ ಕಂಪ್ಲೇಟ್ ಕೊಡ್ತೀವಿ. ಆದ್ರೆ ಪೊಲೀಸ್​ ಸ್ಟೇಷನ್​​ನಲ್ಲೇ ಕಳ್ಳತನವಾದ್ರೆ ಕಂಪ್ಲೇಟ್​ ಕೊಡೋದು ಎಲ್ಲಿ? ಇಂತಹದ್ದೊಂದು ಪ್ರಶ್ನೆಗೆ ಕಾರಣ ಮಹಾರಾಷ್ಟ್ರದ ಪೊಲೀಸ್ ಠಾಣೆಯೊಂದರಲ್ಲಿ ನಡೆದ ಮೊಬೈಲ್ ಕಳ್ಳತನ ಪ್ರಕರಣ! 

ಅಚ್ಚರಿಯಾದ್ರೂ ಇದು ಸತ್ಯ. ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಜೈಸಿಂಗ್​ಪುರ್ ಪೊಲೀಸ್ ಠಾಣೆಯಲ್ಲಿ ಒಂದಲ್ಲ, ಎರಡಲ್ಲ ಬರೋಬ್ಬರಿ 185 ಸೀಜ್ ಆಗಿರೋ ಮೊಬೈಲ್ ಫೋನ್​ಗಳು ಕಳ್ಳತನವಾಗಿದೆ. ವಿಶೇಷ ಕೊಠಡಿಯಲ್ಲಿ ಇರಿಸಲಾಗಿದ್ದ ಪೋನ್​ಗಳನ್ನು ಅನಾಮಿಕನೊಬ್ಬ ಠಾಣೆಗೆ ಬಂದು ಬಾಗಿಲು ಒಡೆದು ದೋಚಿಕೊಂಡು ಹೋಗಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದು, ಆ ಮಹಾ ಕಳ್ಳನಿಗಾಗಿ ಬಲೆ ಬೀಸಿದ್ದಾರೆ. 

ಕಳ್ಳ ಠಾಣೆಗೆ ಬಂದು ಮೊಬೈಲ್ ಕದ್ದು ಹೋಗೋವರೆಗೂ ಪೊಲೀಸರು ಏನ್ ಮಾಡ್ತಿದ್ರು ಅನ್ನೋದು ಸಾರ್ವಜನಿಕರಲ್ಲಿ ಮೂಡಿರೋ ಸಹಜ ಪ್ರಶ್ನೆ. 

 

 

8 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments