ಮೊಬೈಲ್​ ಕಿತ್ತುಕೊಂಡಿದ್ದಕ್ಕೆ ವಿದ್ಯಾರ್ಥಿನಿ ನೇಣಿಗೆ ಶರಣು..!

0
66

ಬೆಂಗಳೂರು : ಪೋಷಕರು ಮೊಬೈಲ್ ಕಿತ್ತುಕೊಂಡಿದ್ದಕ್ಕೆ 10ನೇ ತರಗತಿ ವಿದ್ಯಾರ್ಥಿನಿ ನೇಣಿಗೆ ಶರಣಾದ ಘಟನೆ ರಾಜಾಜಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ರಾಜ್​ಕುಮಾರ್ ರಸ್ತೆಯಲ್ಲಿರುವ ಠ್ಯಾಗೂರ್ ಶಾಲೆಯ ವಿದ್ಯಾರ್ಥಿನಿ ಬೆಸ್ಲಿ (16) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ. 10ನೇ ತರಗತಿ ಎಕ್ಸಾಮ್​ಗೆ ಓದೋದು ಬಿಟ್ಟು ಫ್ರೆಂಡ್ಸ್ ಕೊಡಿಸಿದ ಮೊಬೈಲ್​ನಲ್ಲಿಯೇ ಕಾಲ ಕಳೀತಾ ಇದ್ದಿದ್ದರಿಂದ ಪೋಷಕರು ಮೊಬೈಲ್​ ಕಿತ್ತುಕೊಂಡಿದ್ದರು. ಅಷ್ಟಕ್ಕೇ ಸಂಜೆ ಮನೆಯಲ್ಲಿ ಯಾರೂ ಇಲ್ಲದೇ ಇದ್ದಾಗ ನೇಣಿಗೆ ಶರಣಾಗಿದ್ದಾಳೆ ಎನ್ನಲಾಗಿದೆ. ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here