ಕಳಪೆ ಮದ್ಯ ಸೇವಿಸಿ 15 ಮಂದಿ ಸಾವು

0
191

ಗುವಾಹಟಿ: ಕಳಪೆ ಮದ್ಯ ಸೇವಿಸಿ ನಾಲ್ವರು ಮಹಿಳೆಯರು ಸೇರಿದಂತೆ 15 ಮಂದಿ ಟೀ ಪ್ಲಾಂಟೇಶನ್ ಕೆಲಸಗಾರರು ಮೃತಪಟ್ಟಿರುವ ಘಟನೆ ಅಸ್ಸಾಂನಲ್ಲಿ ನಡೆದಿದೆ. 18 ಮಂದಿ ಆಸ್ಪತ್ರೆಗೆ ದಾಖಲಾಗಿದ್ದು, ಇವರಲ್ಲಿ 4 ಮಂದಿಯ ಸ್ಥಿತಿ ಗಂಭೀರವಾಗಿದೆ ಅಂತ ವೈದ್ಯರು ತಿಳಿಸಿದ್ದಾರೆ.

ಗುವಾಹಟಿಯಿಂದ 310 ಕಿ.ಮೀ ದೂರದ ಗೋಲಘಾಟ್​ನ ಪ್ಲಾಂಟೇಶನ್​ನಲ್ಲಿ ಗುರುವಾರ ರಾತ್ರಿ ಕಳಪೆ ಮದ್ಯ ಸೇವಿಸಿ ಕೆಲಸಗಾರರು ಅಸ್ವಸ್ಥರಾಗಿದ್ದರು. ಕಳಪೆ ಮದ್ಯ ಸೇವಿಸಿರುವುದರಿಂದ ಕೆಲಸಗಾರರು ಅಸ್ವಸ್ಥರಾಗಿರುವುದಾಗಿ ಗೋಲಘಾಟ್​ ಸರ್ಕಾರಿ ಆಸ್ಪತ್ರೆಯ ವೈದ್ಯ ದಿಲೀಪ್ ಹೇಳಿದ್ದಾರೆ. ಸುಮಾರು 100ಕ್ಕೂ ಹೆಚ್ಚು ಜನ ಮದ್ಯ ಸೇವಿಸಿದ್ದು, ಇನ್ನೂ ಅಸ್ವಸ್ಥರ ಸಂಖ್ಯೆ ಹೆಚ್ಚುತ್ತಲೇ ಇದೆ.

LEAVE A REPLY

Please enter your comment!
Please enter your name here