Sunday, June 26, 2022
Powertv Logo
Homeದೇಶನಾಳೆಯಿಂದ ಪ್ಯಾಸೆಂಜರ್ ರೈಲುಗಳ ಸಂಚಾರ ಪುನರಾರಂಭ

ನಾಳೆಯಿಂದ ಪ್ಯಾಸೆಂಜರ್ ರೈಲುಗಳ ಸಂಚಾರ ಪುನರಾರಂಭ

ನವದೆಹಲಿ: ಲಾಕ್​ಡೌನ್ ಆದಾಗಿನಿಂದಲೂ ರೈಲು ಸಂಚಾರ ಸ್ಥಗಿತಗೊಂಡಿತ್ತು. ಆದರೆ ಈಗ ರೈಲು ಸಂಚಾರ ಪುನರಾರಂಭಿಸಲು ಮುಂದಾಗಿದ್ದು, ಮೇ 12 ರಿಂದ ಪಾಸೆಂಜರ್ ರೈಲು ಸಂಚರಿಸಲಿವೆ ಎಂದು ಕೇಂದ್ರ ರೈಲ್ವೇ ಇಲಾಖೆ ಮಾಹಿತಿ ನೀಡಿದೆ.

ನಾಳೆಯಿಂದ ಆರಂಭವಾಗಲಿರುವ ಪ್ರಯಾಣಕ್ಕೆ ಇಂದು ಸಂಝೆ 4 ಗಂಟೆಯಿಂದ ಟಿಕೆಟ್ ಬುಕ್ಕಿಂಗ್ ಪ್ರಾರಂಭವಾಗಲಿದೆ. ನವದೆಹಲಿಯ ರೈಲ್ವೇ ನಿಲ್ದಾಣದಿಂದ 15 ರೈಲುಗಳು ಸಂಚಾರ ಪ್ರಾರಂಭಿಸಲಿದೆ. ದಿಬ್ರುಗಢ್, ಅಗರ್ತಲಾ, ಹೌರಾ, ಪಾಟ್ನಾ, ಬಿಲಾಸ್ಪುರ್, ರಾಂಚಿ, ಭುವನೇಶ್ವರ್, ಸಿಕಂದರಾಬಾದ್ ಬೆಂಗಳೂರು, ಚೆನ್ನೈ, ತಿರುವಂತನಂತಪುರಂ, ಮಡ್ಗಾಂವ್, ಮುಂಬೈ ಸೆಂಟ್ರಲ್, ಅಹಮದಾಬಾದ್ ಮತ್ತು ಜಮ್ಮು – ತಾವಿ ಕಡೆ ರೈಲು ಕಾರ್ಯಾಚರಣೆ ಪ್ರಾರಂಭವಾಗಲಿದೆ ಎಂದು ರೈಲ್ವೇ ಇಲಾಖೆ ಮಾಹಿತಿ ನೀಡಿದೆ.

 

1 COMMENT

LEAVE A REPLY

Please enter your comment!
Please enter your name here

- Advertisment -

Most Popular

Recent Comments