Home ದೇಶ-ವಿದೇಶ ಪೋಷಕರೇ ಹುಷಾರ್! ಆನ್​ಲೈನ್ ಕ್ಲಾಸ್ ಕೇಳಲು ಸ್ಮಾರ್ಟ್​ಫೋನಿಲ್ಲವೆಂದು ಆತ್ಯಹತ್ಯೆಗೆ ಶರಣಾದ ವಿದ್ಯಾರ್ಥಿನಿ!

ಪೋಷಕರೇ ಹುಷಾರ್! ಆನ್​ಲೈನ್ ಕ್ಲಾಸ್ ಕೇಳಲು ಸ್ಮಾರ್ಟ್​ಫೋನಿಲ್ಲವೆಂದು ಆತ್ಯಹತ್ಯೆಗೆ ಶರಣಾದ ವಿದ್ಯಾರ್ಥಿನಿ!

ಕೇರಳ: ಲಾಕ್​ಡೌನ್ ಆದಾಗಿನಿಂದ ಶಾಲಾ-ಕಾಲೇಜುಗಳನ್ನು ಮುಚ್ಚಲಾಗಿದ್ದು, ಇದೀಗ ಲಾಕ್​ಡೌನ್ ಸಡಿಲಿಕೆಯಾದರೂ ಶಾಲಾ-ಕಾಲೇಜುಗಳು ಮಾತ್ರ ಓಪನ್ ಆಗಿಲ್ಲ. ಹಾಗಾಗಿ ಈಗ ಮಕ್ಕಳಿಗೆ ಆನ್​ಲೈನ್ ತರಗತಿಗಳನ್ನು ಪ್ರಾರಂಭಿಸಲಾಗಿದೆ. ಆದರೆ ಆನ್​ಲೈನ್ ಕ್ಲಾಸ್​ಗಳನ್ನು ಕೇಳಲು ಸ್ಮಾರ್ಟ್​ಫೋನ್​ಗಳು ಅಥವಾ ಕಂಪ್ಯೂಟರ್​ಗಳು ಇರುವುದು ಅಗತ್ಯವಾಗಿದೆ. ಸ್ಮಾರ್ಟ್​ಫೋನ್​ಗಳೇ ಇಲ್ಲವಾದರೆ ಆನ್​ಲೈನ್ ಕ್ಲಾಸ್ ಕೇಳುವುದಾದರೂ ಹೇಗೆ? ಆನ್​ಲೈನ್ ಕ್ಲಾಸ್ ಕೇಳಲು ಸ್ಮಾರ್ಟ್​ಫೋನ್​ಗಳು ಇಲ್ಲವೆಂಬ ಕಾರಣಕ್ಕೆ ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯೊಂದು ಕೇರಳದಲ್ಲಿ ನಡೆದಿದೆ.

ಕೇರಳದ ಮಲಪ್ಪುರಂನ ವಾಲಂಚೇರಿಯಲ್ಲಿ 9 ನೇ ತರಗತಿ ವಿದ್ಯಾರ್ಥಿನಿ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕೇರಳ ಸರ್ಕಾರ ಟಿವಿ ಮೂಲಕವೂ ತರಗತಿಗಳನ್ನು ನಡೆಸುತ್ತಿದ್ದು, ಮೃತ ಬಾಲಕಿಯ ಮನೆಯಲ್ಲಿ ಟಿವಿ ಕೆಟ್ಟು ಹೋಗಿತ್ತು, ಹಾಗೆಯೇ ಸ್ಮಾರ್ಟ್​ಫೋನ್​ ಕೂಡಾ ಇಲ್ಲ. ಹಾಗಾಗಿ ಬಾಲಕಿಗೆ ಆನ್​ಲೈನ್ ಕ್ಲಾಸ್​ಗೆ ಹಾಜಾರಾಗಲು ಆಗಿಲಿಲ್ಲವೆಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸದ್ಯ ಬಾಲಕಿಯ ಸಾವಿನ ಬಗ್ಗೆ ವರದಿ ನೀಡುವಂತೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಕೇರಳ ಸರ್ಕಾರ ಸೂಚನೆ ನೀಡಿದೆ. 

LEAVE A REPLY

Please enter your comment!
Please enter your name here

- Advertisment -

Most Popular

5 ವರ್ಷದ ಬಾಲಕಿ ಕಾಣೆ

ಬೆಂಗಳೂರು : ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ 5 ವರ್ಷದ ಬಾಲಕಿ ಕಾಣೆಯಾಗಿದ್ದಾಳೆ. ಲೋಕಿತ ಕೆ.ಮರನ್ ಕಾಣೆಯಾಗಿರುವ ಬಾಲಕಿ‌. ಈಕೆ ತನ್ನ ತಾತನ ಜೊತೆ ಸೆ.18 ರಂದು ಮನೆಯಿಂದ ತೆರಳಿದ್ದಳು. ಮೆಜೆಸ್ಟಿಕ್ ನಿಲ್ದಾಣದಲ್ಲಿ...

ಅಕ್ಕ ಗೌರಿ ಲಂಕೇಶ್​ರನ್ನು ನೆನೆದು ಕಣ್ಣೀರಿಟ್ಟ ಇಂದ್ರಜಿತ್ ಲಂಕೇಶ್..!

ಬೆಂಗಳೂರು : ಸ್ಯಾಂಡಲ್​​ವುಡ್​ ಡ್ರಗ್ಸ್​ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಸಿಸಿಬಿ ವಿಚಾರಣೆ ಎದುರಿಸಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಮತ್ತೊಮ್ಮೆ ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗುತ್ತಿದ್ದಾರೆ.  ಇಂದು ಸಿಸಿಬಿ ವಿಚಾರಣೆಗೆ ಹೋಗುವ...

ಸ್ಯಾಂಡಲ್​​ವುಡ್​​​​​ನಲ್ಲಿ ಡ್ರಗ್​ ಮಾಫಿಯಾ : ಇಂದು ಸಿಸಿಬಿಯಿಂದ ನಟಿ ರಾಗಿಣಿ ವಿಚಾರಣೆ

ಬೆಂಗಳೂರು :  ಸ್ಯಾಂಡಲ್​​​​ವುಡ್​​ನಲ್ಲಿ ಡ್ರಗ್​​ ಮಾಫಿಯಾದ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಾ ಇದೆ. ಚಂದನವನಕ್ಕೆ ಮಾದಕ ಜಾಲ ಹಬ್ಬಿದೆಯೇ ಅಥವಾ ಇಲ್ಲವೇ ಅನ್ನೋದು ಸದ್ಯದ ಗಾಂಧಿನಗರದ ಹಾಟ್ ಸುದ್ದಿ. ಇದಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ...

ಕೊರೋನಾದಿಂದ ಮಾಜಿ ಶಾಸಕ ಅಪ್ಪಾಜಿ ಗೌಡ ನಿಧನ

ಶಿವಮೊಗ್ಗ : ಭದ್ರಾವತಿಯ ಜೆಡಿಎಸ್ ನ ಮಾಜಿ ಶಾಸಕ ಅಪ್ಪಾಜಿಗೌಡ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಕೊರೋನಾ ಸೋಂಕಿಗೆ ಒಳಗಾಗಿದ್ದ ಅವರು,  ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅಪ್ಪಾಜಿಗೌಡರಿಗೆ 69 ವರ್ಷ ವಯಸ್ಸಾಗಿತ್ತು. ಪತ್ನಿ...

Recent Comments