ಬೆಂಗಳೂರು: ಬಿಎಂಟಿಸಿ ಹಾಗೂ ಖಾಸಗಿ ಬಸ್ ಗಳ ಪುಷ್ಕರ ಹಿನ್ನಲೆಯಲ್ಲಿ ಇಂದು ಖಾಸಗಿ ಬಸ್ ಗಳು ಸಂಚರಿಸುತ್ತಿವೆ. ಇಂದು 135 ಖಾಸಗಿ ಬಸ್ ಗಳು ಮಾತ್ರ ಸಂಚಾರ ಮಾಡಲಿವೆ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಶಿಖಾ ಮಾಹಿತಿ ನೀಡಿದ್ದಾರೆ.
ಬಸ್ ಮುಷ್ಕರದ ಬಗ್ಗೆ ಜನರಿಗೆ ಮೊದಲೆ ಮಾಹಿತಿ ಇದ್ದ ಕಾರಣ ಸಮಸ್ಯೆ ಆಗಿಲ್ಲ. ಯುಗಾದಿ ಹಬ್ಬದ ವೇಳೆ ಬೇರೆ ಜಿಲ್ಲೆಗಳಿಗೆ ರೈಲ್ವೆ ಹೆಚ್ಚಳ ಮಾಡಲು ಈ ಸಂಬಂಧ ರೈಲ್ವೆ ಇಲಾಖೆಗೆ ಮನವಿ ಮಾಡಲಾಗುತ್ತದೆ ಎಂದು ಶಿಖಾ ಹೇಳಿದ್ದಾರೆ.
ಸಾರಿಗೆ ನೌಕರರ ಮನವೊಲಿಕೆಗೆ ಸಾಕಷ್ಟು ಪ್ರಯ್ನ ಮಾಡಿದ್ದೇವೆ. ಸಾರಿಗೆ ಸಚಿವರು ಸಭೆ ನಡೆಸಿ ಸಂಧಾನದ ಪ್ರಯತ್ನ ಮಾಡಿದ್ದಾರೆ. ಆದರು ಅವರು ಮುಷ್ಕರವನ್ನು ಕೈ ಬಿಟ್ಟಿಲ್ಲ. ಕರ್ತವ್ಯಕ್ಕೆ ಯಾರು ಬರುವುದಿಲ್ಲ ಅವರಿಗೆ ಸಂಬಳ ನೀಡುವುದಿಲ್ಲ. ನೋ ವರ್ಕ, ನೋ ಪೇ ಎಂಬುವುದನ್ನು ಸ್ಪಷ್ಟಪಡಿಸಿದ್ದೇವೆ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಶಿಖಾ ಹೇಳಿದ್ದಾರೆ.