Home ದೇಶ-ವಿದೇಶ ಪ್ರತಿಭಟನಾಕಾರರ ವಿರೋಧದ ನಡುವೆ ಶಬರಿಮಲೆ ಬೇಸ್​ಕ್ಯಾಂಪ್​​ ತಲುಪಿದ್ರು 50 ಮಹಿಳೆಯರು

ಪ್ರತಿಭಟನಾಕಾರರ ವಿರೋಧದ ನಡುವೆ ಶಬರಿಮಲೆ ಬೇಸ್​ಕ್ಯಾಂಪ್​​ ತಲುಪಿದ್ರು 50 ಮಹಿಳೆಯರು

ಪಂಬಾ: ಅಯ್ಯಪ್ಪನ ದರ್ಶನ ಪಡೆಯಲು ತಮಿಳುನಾಡಿನ 6 ಜನ ಮಹಿಳೆಯರು ಸೇರಿ ಒಟ್ಟು 50 ಜನ ಶಬರಿಮಲೆಯಿಂದ 4 ಕಿ.ಮೀ ದೂರದ ಪಂಬಾ ಬೇಸ್ ಕ್ಯಾಂಪ್​ಗೆ ತಲುಪಿದ್ದಾರೆ. ಇವರೆಲ್ಲರೂ 50 ವರ್ಷದ ಕೆಳಗಿನವರಾಗಿದ್ದು, 20-30 ವರ್ಷದ ಮಹಿಳೆಯರಿದ್ದಾರೆ.

ಮಹಿಳೆಯರ ಪ್ರವೇದ ಕುರಿತು ಪಂಬಾದಲ್ಲಿ ಪ್ರತಿಭಟನೆ ಹೆಚ್ಚಾಗಿದೆ. ಯಾವುದೇ ಕಾರಣಕ್ಕೂ ಮಹಿಳೆಯರನ್ನು ಸನ್ನಿಧಿಯೊಳಗೆ ಪ್ರವೇಶಿಸಲು ಬಿಡೆವು ಎಂದು ಪ್ರತಿಭಟನಾಕಾರರು ವಿರೋಧ ವ್ಯಕ್ತಪಡಿಸುತ್ತಿದ್ದು, ಸನ್ನಿಧಿ ಪ್ರವೇಶಿಸಿ, ಅಯ್ಯಪ್ಪನ ದರ್ಶನ ಮಾಡದೆ ಹಿಂದಿರುಗುವುದಿಲ್ಲ ಎಂದು ಮಹಿಳೆಯರು ಪೊಲೀಸರಿಗೆ ತಿಳಿಸಿದ್ದಾರೆ. ಮಹಿಳೆಯರಿಗೆ ಇರುಮುಡಿಕಟ್ಟು ನೀಡಲು ಪಂಬಾ ಗಣಪತಿ ದೇವಾಲಯ ಮಂಡಳಿ ನಿರಾಕರಿಸಿದೆ. ಆತಂಕದ ವಾತಾವರಣ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಪತ್ತನಂತಿಟ್ಟ ಜಿಲ್ಲಾ ಮ್ಯಾಜಿಸ್ಟ್ರೇಟ್​ ನಿಷೇಧಾಜ್ಞೆಯನ್ನು ಡಿಸೆಂಬರ್​ 27ರ ತನಕ ವಿಸ್ತರಿಸಿದೆ.

ತಮಿಳುನಾಡಿನ ಮಧುರೈನಿಂದ ಆಗಮಿಸಿದ ಮಹಿಳೆಯರಿಗೆ ಪೊಲೀಸ್ ಭದ್ರತೆ ಒದಗಿಸಿದ್ದರು. ತಾವು ಏಕತೆಯನ್ನು ತೋರಿಸಲು ಈ ರೀತಿ ಮಾಡಿರುವುದಾಗಿ ಮಹಿಳೆಯರು ತಿಳಿಸಿದ್ದಾರೆ. ಕೇರಳ, ತಮಿಳುನಾಡು, ಪಶ್ಚಿಮಬಂಗಾಳ, ಒಡಿಶಾದ 50 ಮಹಿಳೆಯರು ಒಟ್ಟಾಗಿ ಸನ್ನಿಧಿ ಪ್ರವೇಶ ಮಾಡಲು ಸಿದ್ಧರಾಗಿದ್ದಾರೆ.

“ದಲಿತ ಮಹಿಳೆಯರೂ ಸೇರಿ ಹಲವಾರು ಮಹಿಳೆಯರು ಸನ್ನಿಧಿಗೆ ಬರುತ್ತಿದ್ದಾರೆ. ಅವರಿಗೆ ಸಂಪೂರ್ಣ ರಕ್ಷಣೆ ನೀಡಿ, ನಮ್ಮ ಹಕ್ಕು ನಾವು ಪಡೆದುಕೊಳ್ಳುವಲ್ಲಿ ಸರ್ಕಾರ ಹಾಗೂ ಪೊಲೀಸರು ನೆರವಾಗಬೇಕು. ದರ್ಶನಕ್ಕೆ ಅಗತ್ಯವಾದ ಎಲ್ಲ ವೃತಗಳನ್ನು ನಾವು ಪಾಲಿಸಿದ್ದೇವೆ” ಅಂತ ಸನ್ನಿಧಿಗೆ ತಲುಪಿದ ಮಹಿಳೆಯೊಬ್ಬರು ತಿಳಿಸಿದ್ದಾರೆ. 50 ವರ್ಷದ ಕೆಳಗಿನ ಮಹಿಳೆಯರೂ ದೇವಸ್ಥಾನ ಪ್ರವೇಶಿಸಬಹುದು ಎಂದು ಸುಪ್ರೀಂಕೋರ್ಟ್ ಸೆಪ್ಟೆಂಬರ್​ನಲ್ಲಿ ತೀರ್ಪು ನೀಡಿತ್ತು.

ಪಂದಳ ರಾಜ ಮನೆತನದ ಪಿ ಆರ್ ಶಶಿಕುಮಾರ್ ಈ ಕುರಿತು ಪ್ರತಿಕ್ರಿಯಿಸಿದ್ದು, “ಸಂಪ್ರದಾಯಗಳನ್ನು ರಕ್ಷಿಸಬೇಕಿದೆ. ಪಂಬಾ ತಲುಪಿದ ಮಹಿಳೆಯರು ವೃತ ಪಾಲಿಸಿದ್ದಾರೆಯೇ ಎಂಬಲ್ಲಿ ಸಂದೇಹಗಳಿವೆ. 41 ದಿನದ ವೃತವನ್ನು ಅವರು ಹೇಗೆ ಮುಗಿಸಿದರು? ಅವರಲ್ಲೇಕೆ ಇರುಮುಡಿಕಟ್ಟು ಇಲ್ಲ” ಎಂದಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Most Popular

‘ಈ ಗ್ರಾಮದಲ್ಲಿ ಎಲ್ಲರಿಗೂ ಕಷಾಯ ಉಚಿತ’

ಗದಗ : ಕೊರೊನಾ ನಿರ್ಮೂಲನೆಗೆ ಗ್ರಾಮ ಪಂಚಾಯತಿಯೊಂದು ವಿಭಿನ್ನ ಹಾಗೂ ವಿನೂತನ ಪ್ರಯತ್ನ ನಡೆಸಿದೆ. ಈಗಾಗಲೇ ರಾಜ್ಯದಲ್ಲಿ ಹಲವು ಗ್ರಾಮ‌ ಪಂಚಾಯತಿಗಳು ಕೊರೋನಾ ನಿರ್ಮೂಲನೆಗೆ ಅತ್ಯುನ್ನತ ಹಾಗೂ ವಿನೂತನ ಕಾರ್ಯಗಳನ್ನ ಮಾಡಿ ಮಾದರಿ...

‘ವಿಚಿತ್ರ ರೋಗಕ್ಕೆ ನವಜಾತ ಶಿಶು ಬಲಿ’

ಬೆಂಗಳೂರು : ಕೊರೋನಾದಿಂದ ಗುಣಮುಖವಾದ ಮಕ್ಕಳನ್ನು ಈಗ ಹೊಸದೊಂದು ರೋಗ ಕಾಡುತ್ತಿದೆ. ಪುಟ್ಟ ಮಕ್ಕಳಲ್ಲೇ ಈ ರೋಗ ಹೆಚ್ಚಾಗಿ ಕಂಡು ಬರುತ್ತಿದ್ದು, ಪೋಷಕರು ಕಂಗಾಲಾಗಿದ್ದಾರೆ. ಈ ರೋಗಕ್ಕೆ ಚಿಕಿತ್ಸೆ ನೀಡಲು ಒಂದು ಮಗುವಿಗೆ...

ಖಾಸಗಿ ಶಾಲಾ ಶುಲ್ಕದಲ್ಲಿ ಕಡಿತ ಮಾಡುವ ಪ್ರಮೇಯವೇ ಇಲ್ಲ : ಕ್ಯಾಮ್ಸ್ ತೀರ್ಮಾನ

ಬೆಂಗಳೂರು : ಖಾಸಗಿ ಶಾಲಾ ಶುಲ್ಕದಲ್ಲಿ ಕಡಿತ ಮಾಡುವ ಪ್ರಮೇಯವೇ ಇಲ್ಲ. ಪೂರ್ತಿ ಶುಲ್ಕ ಕಟ್ಟಲೇ ಬೇಕು ಎಂದು ವರ್ಚುವಲ್ ಮೀಟಿಂಗ್ ನಲ್ಲಿ ಕ್ಯಾಮ್ಸ್ ತೀರ್ಮಾನ ಕೈಗೊಂಡಿದೆ. ವರ್ಚುವಲ್ ಮೀಟಿಂಗ್ ನಲ್ಲಿ 10ಕ್ಕೂ...

ಬೈಕ್‌ ಅಪಘಾತದಲ್ಲಿ ನಟ ಸಂಚಾರಿ ವಿಜಯ್‌ ಗೆ ಗಂಭೀರ ಗಾಯ..

ಬೆಂಗಳೂರು :  ರಾಷ್ಟ್ರ ಪ್ರಶಸ್ತಿ ನಟ ಸಂಚಾರಿ ವಿಜಯ್ ಗೆ ಅಪಘಾತವಾಗಿದ್ದು, ಸಂಚಾರಿ ವಿಜಯ್ ಸ್ಥಿತಿ ಚಿಂತಾಜನಕವಾಗಿದೆ. ಬನ್ನೇರುಘಟ್ಟ ರಸ್ತೆಯಲ್ಲಿರುವ ಅಪೊಲೋ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ನಟ ಸಂಚಾರಿ ವಿಜಯ್ ತಲೆಗೆ...

Recent Comments