ಬೆಂಗಳೂರು: ಕೊರೋನಾ ಎಂಬ ಮಹಾಮಾರಿಯಿಂದಾಗಿ ಸಂಪೂರ್ಣವಾಗಿ ಕ್ಲೋಸ್ ಆಗಿದ್ದ ಶಾಲೆ – ಕಾಲೇಜುಗಳು ಇಂದಿಯಿಂದ ಆರಂಭವಾಗುತ್ತಿವೆ. ಇದರಿಂದ ಶಾಲೆಗಳಲ್ಲಿ ಸಿದ್ಧತೆ ಜೋರಾಗಿವೆ. ಆದರೆ ಇತ್ತ ಬ್ರಿಟನ್ ವೈರಸ್ ತಾಂಡವಾವಾಡುತ್ತಿದ್ದು, ಪೋಷಕರು ಮಕ್ಕಳನ್ನು ಸ್ಕೂಲ್ಗೆ ಕಳಿಸುತ್ತಾರೋ ಇಲ್ವೋ ಅನ್ನೋದೇ ಈಗ ಪ್ರಶ್ನೆಯಾಗಿದೆ.
ವರ್ಷಾಚಾರಣೆಯ ಸಂಭ್ರಮದ ಜೊತೆಗೆ SSLC ಹಾಗೂ 2nd PUC ತಗರತಿ ಆರಂಭವಾಗುತ್ತಿದೆ. ಕೊರೋನಾ ಹಿನ್ನೆಲೆ 10 ತಿಂಗಳು ಬಂದ್ ಆಗಿದ್ದ ಶಾಲಾ-ಕಾಲೇಜುಗಳು ಆರಂಭಸಿಲು ಸರ್ಕಾರ ಸಕಲ ಸಿದ್ಧತೆ ಮಾಡಿಕೊಂಡಿದೆ. ಇತ್ತ ಶಾಲಾ ಆಡಳಿತ ಮಂಡಳಿಗಳು ಹಾಗೂ ಶಿಕ್ಷಣ ಇಲಾಖೆ ತಯಾರಿ ಮಾಡಿಕೊಳ್ಳುತ್ತಿದೆ. ಕಾಲೇಜಿಗೆ ಬರುವಂತಹ ಪ್ರತಿಯೊಬ್ಬ ವಿಧ್ಯಾರ್ಥಿಯು ಕೊವಿಡ್ ನಿಯಮ ಪಾಲನೆ ಮಾಡುವುದು ಕಡ್ಡಾಯವಾಗಿದೆ. ಈ ಬಗ್ಗೆ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲು ದೈಹಿಕ ಶಿಕ್ಷಕರಿಗೆ ತರಬೇತಿಯನ್ನ ಸಹ ನೀಡಲು ಸರ್ಕಾರ ಸಿದ್ಧವಾಗಿದೆ.
ಇನ್ನೂ ಶಾಲಾ- ಕಾಲೇಜುಗಳಿಗೆ ಯಾವ ರೀತಿಯಾಗಿ ಸಿದ್ಧತೆ ಮಾಡಿಕೊಂಡಿದ್ದಾರೆ ಎನ್ನುವ ಬಗ್ಗೆ ತಿಳಿಯಲು ಶಿಕ್ಷಣ ಸಚಿವರಾದ ಸುರೇಶ್ ಕುಮಾರ್, ಬಸವನಗುಡಿ ಬಿ.ಎಂ. ಎಸ್ ಕಾಲೇಜ್, ಜಯನಗರದ ನ್ಯಾಷನಲ್ ಕಾಲೇಜು, ವಿಜಯ ಕಾಲೇಜ್, ಆರ್.ಕೆ.ವಿ. ಕಾಲೇಜು, ಆರ್.ವಿ ಕಾಲೇಜುಗಳಿಗೆ ಭೇಟಿ ನೀಡಿ ಕೊಠಡಿ, ಲ್ಯಾಬ್, ಶೌಚಾಲಯಗಳನ್ನ ಪರಿಶೀಲನೆ ಮಾಡಿದ್ದಾರೆ.
ಇನ್ನೂ ಕಾಲೇಜುಗಳಲ್ಲಿ ಮಕ್ಕಳು ಸಮಾಜಿಕ ಅಂತರ ಕಾಯ್ದಕೊಳ್ಳಲು ಮಾರ್ಕಿಂಗ್ ವ್ಯವಸ್ಥೆ, ಸ್ಯಾನಿಟೈಸಿಂಗ್ ಹಾಗೂ ನಾಮಪಲಕಗಲ್ಲಿ ಕೊರೋನಾ ಜಾಗೃತಿ ಕುರಿತಾಗಿ ನೋಟಿಸ್ ಹಾಕಲಾಗಿದೆ. ಜೊತೆಗೆ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಇನ್ನು ಶಾಲಾ-ಕಾಲೇಜುಗಳ ಶಿಕ್ಷಕರು ಮತ್ತು ಉಪನ್ಯಾಸಕರಿಗೂ ಕೊವಿಡ್ ಟೆಸ್ಟ್ ಮಾಡಲಾಗಿದ್ದು, ನೆಗೆಟಿವ್ ಬಂದ ಅಧ್ಯಾಪಕರು ಮಾತ್ರ ಶಾಲೆಗಳಲ್ಲಿ ಬೋಧಿಸಲು ಅವಕಾಶ ಕಲ್ಪಿಸಲಾಗಿದೆ. ವಿದ್ಯಾರ್ಥಿಗಳಿಗೂ ನೆಗೆಟಿವ್ ರೀಪೋರ್ಟ್ ತರುವಂತೆ ಸೂಚನೆ ಕೊಟ್ಟಿದ್ದಾರೆ. ವಿದ್ಯಾಗಮ ತರಗತಿಗೆ ಪ್ರಾಥಮಿಕ ಶಾಲಾ ಮಕ್ಕಳಿಗೆ ಪಾಲಕರಿಂದ ಕೊರೋನಾ ಸೋಂಕಿನ ಲಕ್ಷಣಗಳಿಲ್ಲ ಎಂಬ ಒಪ್ಪಿಗೆ ಪತ್ರ ತರುವಂತೆ ತಿಳಿಸಲಾಗಿದೆ.