ಬೆಂಗಳೂರು: ಕಿಲ್ಲರ್ ಕೊರೋನಾ ಹಿನ್ನಲೆಯಲ್ಲಿ ಕಳೆದ 8 ತಿಂಗಳಿಂದ ಶಾಲೆ ಬಂದ್ ಆಗಿದ್ದವು. ಜನವರಿ 1 ರಿಂದ ಶಾಲೆ-ಕಾಲೇಜಗಳ ಪುನರಾರಂಭ. ರಾಜ್ಯ ಶಿಕ್ಷಣ ಇಲಾಖೆಯಿಂದ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಜನವರಿ 1 ರಿಂದ 10 ಮತ್ತು 12ನೇ ತರಗತಿ ಪ್ರಾರಂಭ ಮಾಡಲಾಗುತ್ತದೆ. ಜನವರಿ 15 ರಿಂದ ಪ್ರಥಮ ಪಿಯುಸಿ ತರಗತಿ ಆರಂಭ.
ರಾಜ್ಯ ಶಿಕ್ಷಣ ಇಲಾಖೆಯಿಂದ ಮಾರ್ಗಸೂಚಿ ಬಿಡುಗಡೆ
- ಶಾಲೆಗಳಲ್ಲಿರುವ ಸೌಲಭ್ಯ, ಮುನ್ನೆಚ್ಚರಿಕೆ ಬಗ್ಗೆ ಕ್ರಮ
- ಶಿಕ್ಷಕರು ಹಾಗೂ ಸಿಬ್ಬಂದಿಗೆ ಕೊವೀಡ್ ಪರೀಕ್ಷೆ ಕಡ್ಡಾಯ
- ಸಿಬ್ಬಂದಿ, ವಿದ್ಯಾರ್ಥಿಗಳು ಕೊವೀಡ್ ಟೆಸ್ಟ್ ಸಲ್ಲಿಸಬೇಕು
- ಶಾಲೆ ಆರಂಭಕ್ಕೂ ಮುನ್ನ ಕೊವೀಡ್ ಟೆಸ್ಟ್ ಕಡ್ಡಾಯ
- ಶಾಲೆಗೆ ಬಾರದ ವಿದ್ಯಾರ್ಥಿಗಳಿಗೆ ಆನ್ ಲೈನ್ ಕ್ಲಾಸ್
- ಸಾಮಾಜಿಕ ಅಂತರ, ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯ
- ಸೋಪ್ ಅನುಸಾರ ಶಾಲೆಗಳಲ್ಲಿ ಸ್ಯಾನಿಟೈಸರ್ ವ್ಯವಸ್ಥೆ
- 50 ವರ್ಷ ಮೇಲ್ಪಟ್ಟವರು ಫೇಸ್ಶೀಲ್ಡ್ ಧರಿಸಬೇಕು
- ಶಾಲೆ ಆವರಣದಲ್ಲಿ ವಿದ್ಯಾರ್ಥಿಗಳು ಊಟ ಮಾಡುವಂತಿಲ್ಲ
- ವಿದ್ಯಾರ್ಥಿಗೆ ನೆಗಡಿ, ಜ್ವರ ಇದ್ರೆ ಪ್ರತ್ಯೇಕ ಕೊಠಡಿ ವ್ಯವಸ್ಥೆ