ತನಗೆ ಕೊಟ್ಟ ಚಾಕ್ಲೆಟನ್ನು 84ರ ಮಗಳಿಗೆ ತಂದುಕೊಟ್ಟ 107ರ ಅಮ್ಮ!

0
598

ಬೀಜಿಂಗ್ : ಅಮ್ಮ ಎಂದರೆ ಏನೋ ಹರುಷವೋ … ಅಮ್ಮನ ಪ್ರೀತಿಗೆ ಸರಿಸಾಟಿ ಯಾರು ಹೇಳಿ? ಅವಳ ಪ್ರೀತಿಗೆ ವಯಸ್ಸಿನ ಗಡಿಯಿಲ್ಲ. ಎಷ್ಟೇ ದೊಡ್ಡವರಾದರು ತಾಯಿಗೆ ಮಕ್ಕಳು ಮಕ್ಕಳೇ..!  ಪ್ರೀತಿ, ತ್ಯಾಗ ಮಮತೆಗೆ ಅಮ್ಮನಿಗೆ ಅಮ್ಮನೇ ಸಾಟಿ.

ಪ್ರತಿಯೊಬ್ಬ ತಾಯಿಯು ತನಗಾಗಿ ಏನನ್ನೂ ಬಯಸಲ್ಲ. ಏನೇ ಸಿಕ್ಕರೂ ಅದು ತನ್ನ ಮಕ್ಕಳಿಗೆ ಅಂತ ತೆಗೆದುಕೊಂಡು ಬರ್ತಾರೆ. ನಿಮ್ಗೂ ಗೊತ್ತು ಮದ್ವೆಮನೆ ಸೇರಿದಂತೆ ಯಾವ್ದೇ ಕಾರ್ಯಕ್ರಮಕ್ಕೆ ಹೋದ್ರು ಅಮ್ಮ ತನಗೆ ಕೊಟ್ಟ ಸಿಹಿತಿಂಡಿಗಳನ್ನು ಮಕ್ಕಳಿಗೆ ತಂದು ಕೊಡ್ತಾರೆ. ಹಾಗೆಯೇ ಚೀನಾದ 107 ವರ್ಷದ ಅಜ್ಜಿ ತನ್ನ 84 ವರ್ಷದ ಮಗಳಿಗೆ ಚಾಕ್ಲೆಟ್​ ತಂದುಕೊಟ್ಟಿದ್ದಾರೆ.  ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದೆ.

LEAVE A REPLY

Please enter your comment!
Please enter your name here