ಕಾರ್ಪೆಟ್​ ಕಾರ್ಖಾನೆಯಲ್ಲಿ ಅಗ್ನಿ ದುರಂತ: 10 ಮಂದಿ ಸಾವು

0
156

ಲಖನೌ: ಉತ್ತರ ಪ್ರದೇಶದ ಭದೋಯ್ ಜಿಲ್ಲೆಯಲ್ಲಿ ಕಾರ್ಪೆಟ್​ ಕಾರ್ಖಾನೆಯಲ್ಲಿ ನಡೆದ ಸ್ಫೋಟದಲ್ಲಿ 10 ಜನ ಮೃತಪಟ್ಟಿರುವ ಘಟನೆ ನಡೆದಿದೆ. ಕಾರ್ಖಾನೆಯ ಒಂದು ಭಾಗದಲ್ಲಿ ಪಟಾಕಿಗಳನ್ನೂ ತಯಾರಿಸಲಾಗುತ್ತಿತ್ತು. ಕಾರ್ಖಾನೆ ಕಟ್ಟಡದೊಳಗೆ ಸಂಗ್ರಹಿಸಿಟ್ಟಿದ್ದ ಪಟಾಕಿಗೆ ಬೆಂಕಿ ತಗುಲಿ ಸ್ಫೋಟ ಸಂಭವಿಸಿರುವುದಾಗಿ ತಿಳಿದುಬಂದಿದೆ. ಸ್ಫೋಟ ಸಂಭವಿಸಿದ ಪ್ರದೇಶದ ಸಮೀಪದಲ್ಲಿಯೇ ಮೂರು ಮನೆಗಳೂ ಕುಸಿದಿವೆ. ಸ್ಥಳದಲ್ಲಿ ರಕ್ಷಣಾ ಕಾರ್ಯ ಮುಂದುವರೆದಿದ್ದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಸ್ಥಳಕ್ಕೆ ತಲುಪಿದೆ.

LEAVE A REPLY

Please enter your comment!
Please enter your name here