ಬೆಂಗಳೂರು: ರಾಜ್ಯದಲ್ಲಿ ಕಿಲ್ಲರ್ ಕೊರೋನ ತಾಂಡವಾಡುತ್ತಿದೆ. ಸಿಲಿಕಾನ್ ಸಿಟಿಯಲ್ಲಿ ಬ್ರಿಟನ್ ಕೊರೋನ ವೈರಸ್ ಭೀತಿ ಶುರುವಾಗಿದೆ.
ಇಂಗ್ಲೆಂಡ್ ನಿಂದ ಬಂದಿದ್ದ 10 ಮಂದಿಗೆ ಕೊರೋನಾ ಪಾಸಿಟಿವ್ ಬಂದಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ. ವೈರಸ್ ಪತ್ತೆಯಾದವರಿಗೆ ರೂಪಾಂತರ ಕೊರೋನವೇ ಎಂಬುವುದನ್ನು ತಿಳಿಯಲು ಜೆನೆಟಿಕ್ ಸಿಕ್ವೇನ್ಸಿಂಗ್ ಟೆಸ್ಷ್ ಮಾಡಿಸಬೇಕು. ಜೆನಿಟಿಕ್ ಸಿಕ್ವೇನ್ಸಿಂಗ್ ಟೆಸ್ಷ್ ಮಾಡಿಸೋಕೆ 2 ರಿಂದ 3 ದಿನ ಬೇಕಾಗುತ್ತದೆ. ಎರಡು ಮೂರು ದಿನಗಳಳ್ಳಿ ರೂಪಾಂತರ ವೈರಸ್ ಬಗ್ಗೆ ತಿಳಿಯಲಿದೆ ಎಂದು ಡಾ.ಕೆ.ಸುಧಾಕರ್ ಹೇಳಿದ್ದಾರೆ.