Sunday, June 26, 2022
Powertv Logo
Homeದೇಶಜಗತ್ತಿನಾದ್ಯಂತ ಕಳೆದ 24 ಗಂಟೆಯಲ್ಲಿ 1 ಲಕ್ಷಕ್ಕೂ ಅಧಿಕ ಜನರಲ್ಲಿ ಕೊರೋನಾ ಪಾಸಿಟಿವ್ : 5...

ಜಗತ್ತಿನಾದ್ಯಂತ ಕಳೆದ 24 ಗಂಟೆಯಲ್ಲಿ 1 ಲಕ್ಷಕ್ಕೂ ಅಧಿಕ ಜನರಲ್ಲಿ ಕೊರೋನಾ ಪಾಸಿಟಿವ್ : 5 ಸಾವಿರಕ್ಕೂ ಅಧಿಕ ಸಾವು

ಜಿನೇವಾ: ಜಗತ್ತಿನಾದ್ಯಂತ  ಕದಂಬ ಬಾಹು ಚಾಚುತ್ತಿರುವ ಕೋವಿಡ್-19 ಗೆ ಕೇವಲ 24 ಗಂಟೆಯಲ್ಲಿ 5,283 ಜನ ಸೋಂಕಿತರು ಸಾವನ್ನಪ್ಪಿದ್ದಾರೆ. ಈವರೆಗೆ ಒಟ್ಟು ಜಗತ್ತಿನಲ್ಲಿ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 3,56,937 ಕ್ಕೆ ಏರಿಕೆಯಾಗಿದೆ. ಇನ್ನು ಈವರೆಗೆ ಒಟ್ಟು 57,84,603 ಜನರಲ್ಲಿ ಸೋಂಕು ಪತ್ತೆಯಾಗಿದ್ದು, ಕೇವಲ 24 ಗಂಟೆಯಲ್ಲಿ ಸೋಂಕು 1 ಲಕ್ಷದ 6 ಸಾವಿರಕ್ಕೂ ಹೆಚ್ಚು ಜನರಿಗೆ ಸೋಂಕು ಹರಡಿದೆ. ಇವೆಲ್ಲದರ ನಡುವೆ ಸೋಂಕಿನಿಂದ 24,94,362 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.

ಜಗತ್ತಿನ ದೊಡ್ಡಣ್ಣ ಅಮೆರಿಕಾವನ್ನು ಮಹಾಮಾರಿ ಬಿಡದೇ ಕಾಡುತ್ತಿದೆ. ದಿನದಿಂದ ದಿನಕ್ಕೆ ಸೋಂಕಿತರ  ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಸೋಂಕಿತರ ಸಂಖ್ಯೆ ಕೇವಲ 24 ಗಂಟೆಯಲ್ಲಿ 20,546 ರಷ್ಟು ಏರಿಕೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 17,45,803 ಏರಿಕೆಯಾಗಿದೆ. ಇನ್ನು ಅಮೆರಿಕಾದಲ್ಲಿ ಈವರೆಗೆ 4,90,130 ಮಂದಿ ಸೋಂಕಿನಿಂದ ಗುಣಮುಖರಾಗಿದ್ದರೆ, ಸಾವನ್ನಪ್ಪಿದವರ ಸಂಖ್ಯೆಯೂ 1ಲಕ್ಷದ ಗಡಿ ದಾಟಿದೆ.

ಜಗತ್ತಿನ ಸೋಂಕಿತರ ಪಟ್ಟಿಯಲ್ಲಿ ಬ್ರೆಜಿಲ್ ಎರಡನೇ ಸ್ಥಾನದಲ್ಲಿದ್ದು, 22,301ಜನರಲ್ಲಿ ಸೋಂಕು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 4,14, 661 ಕ್ಕೆ ಏರಿಕೆಯಾಗಿದೆ. ಇನ್ನು ಈವರೆಗೆ 25,697 ಜನರು ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಒಟ್ಟು 1,66,647 ಜನರಿಗೆ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.

ರಷ್ಯಾ ಮೂರನೇ ಸ್ಥಾನಕ್ಕೆ ಬಂದು ನಿಂತಿದ್ದು, ರಷ್ಯಾದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳವಾಗಿದ್ದು, 3,70,680 ಕ್ಕೆ ಏರಿಕೆಯಾಗಿದ್ದು, ಕೇವಲ ಒಂದೇ ದಿನದಲ್ಲಿ 8,338 ಜನರಲ್ಲಿ ಸೋಂಕು ಪತ್ತೆಯಾಗಿದೆ. ಇನ್ನು ಈವರೆಗೆ ಒಟ್ಟು 3,968 ಜನ ಸೋಂಕಿತರು ಮೃತಪಟ್ಟಿದ್ದಾರೆ.

ಇನ್ನು ಸ್ಪೇನ್​ನಲ್ಲಿ ಒಟ್ಟು 2,83,849 ಜನ ಸೋಂಕಿತರು ಪತ್ತೆಯಾಗಿದ್ದು, ಈವರೆಗೆ ಒಟ್ಟು 27,118 ಜನ ಸೋಂಕಿತರು ಸಾವನ್ನಪ್ಪಿದ್ದಾರೆ. ಇದರ ನಡುವೆ 1,96,958 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.

ಜಗತ್ತಿನ ಸೋಂಕಿತರ ಪಟ್ಟಿಯಲ್ಲಿ ಸ್ಪೇನ್ ನಂತರದ ಸ್ಥಾನದಲ್ಲಿ ಯುಕೆ ಇದ್ದು, ಒಂದೇ ದಿನದಲ್ಲಿ 2013 ಜನರಲ್ಲಿ ಸೋಂಕು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 2,67,240 ಕ್ಕೆ ಏರಿದೆ. ಇನ್ನು ಅಲ್ಲಿ ಸಾವನ್ನಪ್ಪಿದವರ ಸಂಖ್ಯೆಯೂ ಹೆಚ್ಚಾಗಿದ್ದು, 37,460 ಕ್ಕೇರಿಕೆಯಾಗಿದೆ.

ಮೂರನೇ ಸ್ಥಾನದಲ್ಲಿದ್ದ ಇಟಲಿಯು 6 ನೇ ಸ್ಥಾನಕ್ಕೆ ಇಳಿದಿದ್ದು, ಅಲ್ಲಿ ಕಳೆದ 24 ಗಂಟೆಯಲ್ಲಿ 584 ಜನರಲ್ಲಿ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 2,31,139 ಕ್ಕೆ ಏರಿಕೆಯಾಗಿದೆ. ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆಯು ಏರಿಕೆಯಾಗಿದ್ದು, ಮೃತಪಟ್ಟವರ ಸಂಖ್ಯೆಯೂ 33 ಸಾವಿರದ ಗಡಿ ದಾಟಿದೆ. ಇಲ್ಲಿ ಚೇತರಿಸಿಕೊಂಡವರ ಸಂಖ್ಯೆಯೂ ಏರಿಕೆಯಾಗಿದ್ದು, 1,47,101 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.

1 COMMENT

LEAVE A REPLY

Please enter your comment!
Please enter your name here

- Advertisment -

Most Popular

Recent Comments