Friday, October 7, 2022
Powertv Logo
Homeರಾಜ್ಯಸಿಎಂ ಬಿಎಸ್​ವೈಗೆ ಕಾಗೋಡು ತಿಮ್ಮಪ್ಪ ಸವಾಲ್​ !

ಸಿಎಂ ಬಿಎಸ್​ವೈಗೆ ಕಾಗೋಡು ತಿಮ್ಮಪ್ಪ ಸವಾಲ್​ !

ಸಿ.ಎಂ. ಯಡ್ಯೂರಪ್ಪರಿಗೆ ತಾಕತ್ತಿದ್ದರೆ, ಭೂ ಸುಧಾರಣಾ ಕಾಯ್ದೆ ಜಾರಿಗೆ ತರಲಿ ಎಂದು ಮಾಜಿ ಸಚಿವ ಮತ್ತು ಕಾಂಗ್ರೆಸ್ ನ ಹಿರಿಯ ಮುಖಂಡ ಕಾಗೋಡು ತಿಮ್ಮಪ್ಪ ಸವಾಲೇಸಿದ್ದಾರೆ. ಭೂ ಸುಧಾರಣೆ ಕಾಯ್ದೆ ಮೂಲಕ ಶ್ರೀಮಂತರ, ರಿಯಲ್ ಎಸ್ಟೇಟ್ ನವರಿಗೆ ರಾಜ್ಯ ಸರ್ಕಾರ ಅನುಕೂಲ ಮಾಡಲು ಹೊರಟಿದೆ ಎಂದು ಹಿರಿಯ ಮುಖಂಡರಾದ ಕಾಗೋಡು ತಿಮ್ಮಪ್ಪ ಆಪಾದಿಸಿದ್ದಾರೆ. ಶಿವಮೊಗ್ಗದಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಭೂ ಸುಧಾರಣೆ ಕಾಯ್ದೆ ಮೂಲಕ ಶ್ರೀಮಂತರು, ರಿಯಲ್ ಎಸ್ಟೇಟ್ ನವರಿಗೆ ರಾಜ್ಯ ಸರ್ಕಾರ ಅನುಕೂಲ ಮಾಡಲು ಹೊರಟಿದೆ. ಸರ್ಕಾರಕ್ಕೆ ತಾಕತ್ತು ಇದ್ದರೆ ಕಾಯ್ದೆ ಜಾರಿಗೆ ತರಲಿ ಎಂದು ಆಕ್ರೋಶಭರಿತರಾಗಿ ಸವಾಲೆಸಿದಿದ್ದಾರೆ. ಸರ್ಕಾರಕ್ಕೆ ಭೂ ಸುಧಾರಣೆಯಲ್ಲಿ ಹಿಡುವಳಿದಾರರಿಗೆ 108 ಎಕರೆಯನ್ನ ಏಕಕಾಲದಲ್ಲಿ ಖರೀದಿಸುವ ಅವಕಾಶ ಮಾಡಿಕೊಡಲು ಚಿಂತಿಸುತ್ತಿದೆ. 108 ಎಕರೆ ಯಾಕೆ ಏಕಕಾಲದಲ್ಲಿ ಓರ್ವ ಖರೀದಿಸುತ್ತಾನೆ ಎಂದು ಪ್ರಶ್ನಿಸಿದ ಕಾಗೋಡು ತಿಮ್ಮಪ್ಪ, ಬಿಜೆಪಿ ಶ್ರೀಮಂತರ ಪರ ಎಂಬುದು ಸಾಬೀತಾಗುತ್ತಿದೆ ಎಂದಿದ್ದಾರೆ. ಕಾಂಗ್ರೆಸ್ ಪಕ್ಷವು, ಗೇಣಿದಾರರಿಗೆ ಮೋಸ ಮಾಡಬಾರದೆಂದು ಭೂಸುಧಾರಣೆ ನೀತಿ ಜಾರಿಗೆ ತಂದು ಬಡವರ ಪರ ನಿಂತಿತ್ತು. ಆದರೆ, ಇಂದು ಬಿಜೆಪಿ ರಿಯಲ್ ಎಸ್ಟೇಟ್ ಹಾಗೂ ಶ್ರೀಮಂತರ ಪರ ನಿಲ್ಲಲು ಹೊರಟಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಪ್ರಾಣ ಹೋದರೂ ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಜಾರಿಗೆ ಬಿಡುವುದಿಲ್ಲ. ಉಳುವವನೇ ಹೊಲದೊಡೆಯ ಎಂಬ ನೀತಿಯನ್ನು ಬದಲಿಸಿ, ಉಳ್ಳವನೇ ಹೊಲದೊಡೆಯ ಮಾಡಲು ಮುಖ್ಯಮಂತ್ರಿ ಯಡಿಯೂರಪ್ಪ ಹೊರಟಿದ್ದಾರೆ. ಇದು ಪ್ರಜಾತಂತ್ರದ ವಿರೋಧ ನೀತಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಿಕ್ಕ ರೈತರ ಭೂ ಹಿಡುವಳಿ ತಪ್ಪಿಸಿ, ಶ್ರೀಮಂತರ ಕೈಗೆ ಭೂಮಿ ನೀಡಲು ಮುಂದಾಗುವ ಕಾಯ್ದೆ ತರಲು ಮುಂದಾದರೆ, ಬೀದಿಗಿಳಿದು ಹೋರಾಟ ಮಾಡುವುದಾಗಿ ಎಚ್ಚರಿಕೆ ಕೂಡ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ತಂತ್ರಗಾರಿಕೆಯಿಂದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕೊಲೆ ಮಾಡುತ್ತಿದ್ದಾರೆ. ಇಂತಹ ಬಿಜೆಪಿ ನೀತಿಗಳ ವಿರುದ್ಧ ಹೋರಾಡುವ ಶಕ್ತಿ ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಇದೆ ಎಂದು ಕಾಗೋಡು ತಿಮ್ಮಪ್ಪ ಸವಾಲೆಸೆದಿದ್ದಾರೆ.

- Advertisment -

Most Popular

Recent Comments