Home ರಾಜ್ಯ ಪೊಲೀಸ್​ ಪೇದೆ ವಿರುದ್ಧ ರೊಚ್ಚಿಗೆದ್ದ ಗ್ರಾಮಸ್ಥರು

ಪೊಲೀಸ್​ ಪೇದೆ ವಿರುದ್ಧ ರೊಚ್ಚಿಗೆದ್ದ ಗ್ರಾಮಸ್ಥರು

ಕೊಪ್ಪಳ: ಅಕ್ರಮ ಮರಳುಗಾರಿಕೆ ಮಾಡುತ್ತಿದ್ದಾರೆಂದು ಆರೋಪಿಸಿ ಕೊಪ್ಪಳದ ಕಾರಟಗಿ ಪೊಲೀಸರು ಸಿಂಧನೂರು ತಾಲೂಕಿನ ತುಂಗಭದ್ರ ನದಿ ಪ್ರದೇಶದ ಗ್ರಾಮವೊಂದರಲ್ಲಿ ಟ್ರ್ಯಾಕ್ಟರ್‌ಗಳನ್ನು ವಶಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸಿ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದ್ದಾರೆ.

ಮುಕ್ಕುಂದ ಗ್ರಾಮದಲ್ಲಿ 4-5 ಗ್ರಾಮಗಳಿಗೆ ಉಪಯೋಗವಾಗುವ ಕುಡಿಯುವ ನೀರಿನ ಯೋಜನೆಯ ನಿರ್ಮಾಣ ಕಾಮಗಾರಿ ನಡೆಯುತ್ತಿದೆ.  ಈ ಸರಕಾರಿ ಯೋಜನೆ ಕಾಮಗಾರಿಗೆ ಸ್ಥಳೀಯರು ಟ್ರ್ಯಾಕ್ಟರ್‌ಗಳಿಂದ ಮರಳು ಸಾಗಿಸುತ್ತಾರೆ. ಆದರೆ, ಶುಕ್ರವಾರ ಬೆಳಗ್ಗೆ ತನ್ನ ವ್ಯಾಪ್ತಿಯಲ್ಲದ ಮುಕ್ಕುಂದ ಗ್ರಾಮಕ್ಕೆ ತೆರಳಿದ ಪೇದೆ ಭೀಮಣ್ಣ ಭಾಷಾ ಎನ್ನುವವರಿಗೆ ಸೇರಿದ ಟ್ರ್ಯಾಕ್ಟರ್‌ನ್ನು ವಶಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸಿದ್ದಾರೆ. ಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ  ಲತೀಫ್ ಎನ್ನುವವರು ಇದನ್ನು ವಿರೋಧಿಸಿದ್ದರು. ಇದರಿಂದಾಗಿ ರೊಚ್ಚಿಗೆದ್ದ ಪೇದೆ ಅವರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಹಿರಿಯ ಅಧಿಕಾರಿಗಳು ತನಿಖೆ ನಡೆಸಿದರೆ ಎಲ್ಲರ ಬಣ್ಣ ಬಯಲಾಗುತ್ತದೆ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಅಕ್ರಮ ಮರಳುಗಾರಿಕೆಯಲ್ಲಿ ಕಾರಟಗಿಯ ಪೇದೆಗಳ ಪಾಲು ಬಹುತೇಕವಿದೆ. ಮಾಮೂಲು ಕೊಡದಿದ್ದ ಕಾರಣಕ್ಕೆ ತಮ್ಮ ವ್ಯಾಪ್ತಿಯಲ್ಲದ ಮುಕ್ಕುಂದ ಗ್ರಾಮಕ್ಕೆ ಬಂದು ದೌರ್ಜನ್ಯವೆಸಗಿದ್ದಾರೆ. ನಾವು ತಪ್ಪು ಮಾಡಿದ್ದರೆ ನಮ್ಮ ಮೇಲೆ ಕ್ರಮ ಕೈಗೊಳ್ಳಲಿ, ನನ್ನ ಎಂಜಿನ್ ಬೇರೆ ಕಡೆ ಇದೆ, ಬೇರೆ ಟ್ರಾಲಿ ತೆಗೆದುಕೊಂಡು ಹೋಗಿ ಕೇಸ್ ಮಾಡಿದ ಹಿಂದಿನ ಅರ್ಥ ಮಾಮೂಲು ಕೊಟ್ಟಿಲ್ಲ ಎಂದು ಭಾಷಾ ಮುಕ್ಕುಂದಿ, ಆರೋಪಿಸಿದ್ದಾರೆ.

ಸ್ಥಳದಲ್ಲಿಯೇ 10-12 ಜನ ಗ್ರಾಮಸ್ಥರು ಸೇರಿ ಪೇದೆಯನ್ನು ಸುತ್ತುವರಿದು ಮೊದಲು ಮನವಿ ಮಾಡಿ ಯಾರು ತಪ್ಪು ಮಾಡಿಲ್ಲ, ದೌರ್ಜನ್ಯ ಮಾಡಬೇಡಿ ಎಂದು ಬೇಡಿಕೊಂಡಿದ್ಧಾರೆ.  ನಮಗೆ ಪೊಲೀಸರ ಮೇಲೆ ವಿಶ್ವಾಸ, ಗೌರವವಿದೆ ಎಂದು ಪರಿ ಪರಿಯಾಗಿ ಕೇಳಿಕೊಂಡರು. ಆದರೂ ಪೇದೆ ಭೀಮಣ್ಣ ತನ್ನ ಪಿಎಸ್‌ಐಗೆ ದೂರವಾಣಿಯಲ್ಲಿ ತಪ್ಪು ಮಾಹಿತಿ ನೀಡಿ, ಗ್ರಾಮಸ್ಥರು ತನ್ನ ಕೆಲಸಕ್ಕೆ ಅಡ್ಡಿ ಪಡಿಸುತ್ತಿದ್ದಾರೆಂದು ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳಾದ ಲತೀಫ್ ಮತ್ತು ಗ್ರಾಮದ ಮುಖಂಡ ರಮೇಶ್ ಹೇಳಿದರು. ನಂತರ ಸ್ಥಳಕ್ಕೆ ತೆರಳಿದ ಕಾರಟಗಿ ಪಿಎಸ್‌ಐ ವಿಜಯಕೃಷ್ಣ ಬೇರೆ ಎಂಜಿನ್ ಮತ್ತು ಮರಳು ತುಂಬಿದ್ದ ಮತ್ತೊಂದು ಟ್ರಾಲಿ ವಶಕ್ಕೆ ತೆಗೆದುಕೊಂಡು ಠಾಣೆಗೆ ತಂದು ಪ್ರಕರಣ ದಾಖಲಿಸಿದ್ದಾರೆ.

ಮುಕ್ಕುಂದ ಗ್ರಾಮ ಸೇರಿದಂತೆ ಬೂದುಗುಂಪಾ, ನಂದಿಹಳ್ಳಿ, ಕಕ್ಕರಗೋಳ, ಉಳೇನೂರು, ಜಮಾಪುರ ಗ್ರಾಮದಿಂದ ನಿತ್ಯ 35-45 ಟ್ರ್ಯಾಕ್ಟರ್‌ಗಳು ಅಕ್ರಮವಾಗಿ ಮರಳು ಸಾಗಿಸುತ್ತವೆ. ಇದಕ್ಕೆ  ಪೊಲೀಸರು ಬಂದು ಮಾಮೂಲು ಪಡೆಯುತ್ತಾರೆ. ನಿತ್ಯ ರಾತ್ರಿ ಈ ಟ್ರ್ಯಾಕ್ಟರ್‌ಗಳ ಓಡಾಟ ತಪ್ಪಿಸುವಂತೆ ಜನರು ಕಾರಟಗಿ ಠಾಣೆಗೆ ದೂರವಾಣಿ ಮೂಲಕ ತಿಳಿಸಿದರೂ, ಮುಕ್ಕುಂದ ನಮ್ಮ ಠಾಣೆಗೆ ಬರುವುದಿಲ್ಲ ಎನ್ನುತ್ತಿದ್ದ ಪೊಲೀಸರು ಇಂದು ಯಾಕೆ ಬಂದರು ಎಂದು ಗ್ರಾಮಸ್ಥರು ಪ್ರಶ್ನಿಸಿದರು. ಬೇಕಾದರೆ ಸಿಂಧನೂರು ಪೊಲೀಸರು ಕರೆಯಿರಿ ಅವರು ಬಂದು ತನಿಖೆ ಮಾಡಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲಿ ಎಂದು ಗ್ರಾಮಸ್ಥರು ಹೇಳಿದ್ದಾರೆ.  

 

LEAVE A REPLY

Please enter your comment!
Please enter your name here

- Advertisment -

Most Popular

ಸಿದ್ಧರಾಮಯ್ಯ ಟ್ವೀಟ್​ಗೆ ಕಿಡಿ ಕಾರಿದ ಈಶ್ವರಪ್ಪ..!

ಶಿವಮೊಗ್ಗ: ಬೆಂಗಳೂರು ಗಲಭೆ ಸಂಬಂಧ ವಿಪಕ್ಷ ನಾಯಕ ಸಿದ್ಧರಾಮಯ್ಯ ಟ್ವೀಟ್​ಗೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಕಿಡಿ ಕಾರಿದ್ದಾರೆ. ಹಿಂದೂ ಗುರುಗಳು, ಮುಸ್ಲಿಂ ಹಿರಿಯರು ಶಾಂತಿ ಸ್ಥಾಪನೆಗೆ ಪ್ರಯತ್ನ ಮಾಡಿ ಎಂದು ಸಿದ್ಧರಾಮಯ್ಯ...

ಪತ್ರಕರ್ತರ ಮೇಲೆ ಹಲ್ಲೆ ಖಂಡಿಸಿ ಪತ್ರ ಚಳುವಳಿ..!

ಕೊಪ್ಪಳ : ಪತ್ರಕರ್ತರ ಮೇಲೆ ನಡೆಯುವ ಹಲ್ಲೆಗಳು ತಡೆಗೆ ಕಾಯ್ದೆ ರೂಪಿಸಬೇಕು ಎಂದು ಕೊಪ್ಪಳ ಮೀಡಿಯಾ ಕ್ಲಬ್ ಪತ್ರಕರ್ತರು ಪತ್ರ ಚಳುವಳಿ ಆರಂಭಿಸಿದ್ದಾರೆ. ಪದೇ ಪದೇ ಪತ್ರಕರ್ತರ ಮೇಲೆ ಒಂದಲ್ಲ ಒಂದು ರೀತಿಯ ಹಲ್ಲೆಗಳು...

ರಾಜ್ಯದಲ್ಲಿ ಅರಾಜಕತೆ ಸೃಷ್ಟಿಸಲು ರಾಜಕೀಯ ಕೈವಾಡ : ನಳೀನ್​ ಕಮಾರ್ ಕಟೀಲು

ಹುಬ್ಬಳ್ಳಿ : ಕೆ.ಜಿ ಹಳ್ಳಿ ಘಟನೆಯಲ್ಲಿ ಸರ್ಕಾರಿ ಆಸ್ತಿ ಪಾಸ್ತಿಗಳನ್ನು ಹಾನಿ ಮಾಡಲಾಗಿದೆ, ಮಾಧ್ಯಮದವರ ಮೇಲೆ ಹಲ್ಲೆ ಮಾಡಿದ್ದಾರೆ. ಅವರ ಮೇಲೆ ಕಠಿಣ ಕ್ರಮಗೈಗೊಳ್ಳಬೇಕು. ಇದು ರಾಜಕೀಯ ಹುನ್ನಾರ, ರಾಜ್ಯದಲ್ಲಿ ಗಲಭೆ ಎಬ್ಬಿಸುವ...

ಕೆ.ಜಿ ಹಳ್ಳಿ ಗಲಭೆಗೆ ಗುಪ್ತಚರ ಇಲಾಖೆ ದುರ್ಬಲವಾಗಿರುವುದೇ ಕಾರಣ : ತನ್ವೀರ್ ಸೇಠ್

ಮೈಸೂರು : ಬೆಂಗಳೂರಿನ ಕೆ.ಜಿ.ಹಳ್ಳಿಯಲ್ಲಿ ನಡೆದ ಗಲಭೆಗೆ ರಾಜ್ಯದ ಗುಪ್ತಚರ ಇಲಾಖೆ ದುರ್ಬಲವಾಗಿರುವುದೇ ಕಾರಣ ಎಂದು ಮೈಸೂರಿನ ಎನ್.ಆರ್.ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಆರೋಪಿಸಿದ್ದಾರೆ.  ರಾಜ್ಯದಲ್ಲಿ ಗುಪ್ತಚರ ಇಲಾಖೆ ತುಂಬಾ ವೀಕ್ ಆಗಿದೆ. ಮುಂದೆ...

Recent Comments