ಶಿವಮೊಗ್ಗ : ಪೊಲೀಸ್ ಹೆಸರು ಹೇಳಿ ನಕಲಿ ಐಡಿ ಕಾರ್ಡ್ ತೋರಿಸಿ ಖದೀಮರು ಸುಮಾರು 3 ಲಕ್ಷ ರೂ ಮೌಲ್ಯದ ಚಿನ್ನಾಭರಣವನ್ನು ಕದ್ದು ಪರಾರಿಯಾಗಿದ್ದಾರೆ. ಶಿವಮೊಗ್ಗದ ಹರಕೆರೆ ಬಳಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಭಾನುವಾರ ಮಧ್ಯಾಹ್ನ ದಂಪತಿ ಬೈಕ್ ನಲ್ಲಿ ಶಿವಮೊಗ್ಗ ಕಡೆಯಿಂದ ಗಾಜನೂರು ರಸ್ತೆಯಲ್ಲಿ ತೆರಳುತ್ತಿದ್ದರು. ಅದೇ ವೇಳೆ ಹರಕರೆಯ ನಾರಾಯಣ ಹೃದಯಾಲಯದ ಮುಂಭಾಗ ಬೈಕ್ ನಲ್ಲಿ ಪೊಲೀಸರ ಸೋಗಿನಲ್ಲಿದ್ದ ಖದೀಮರು ಇಂದು ಎರಡು ಕಡೆ ಬಂಗಾರದ ಸರ ಅಪಹರಿಸಲಾಗಿದೆ. ನೀವು ಹೀಗೆಲ್ಲಾ ಒಡವೆ ಹಾಕಿಕೊಂಡು ಹೋಗಬೇಡಿ ಎಂದು, ದಂಪತಿ ಮೈಮೇಲಿದ್ದ ಒಡವೆಗಳನ್ನು ಬಿಚ್ಚಿಕೊಂಡು ಹೋಗುವಂತೆ ತಿಳಿಸಿದ್ದಾರೆ.
ಈ ರೀತಿ ಪೊಲೀಸರೇ ಹೇಳುವಾಗ ಯಾರಾದ್ರೂ ನಂಬದೇ ಇರುತ್ತಾರೆಯೇ? ಇಲ್ಲಿ ಆಗಿದ್ದು ಅಷ್ಟೆ, ತಕ್ಷಣ ಮಹಿಳೆ ತನ್ನ 60 ಗ್ರಾಂ ಮಾಂಗಲ್ಯ ಸರ, ಉಂಗುರ, ಪತಿ ತನ್ನ ಉಂಗುರ ಹಾಗೂ ಕೊರಳಿನಲ್ಲಿದ್ದ ಚೈನ್ ಗಳನ್ನು ತಮ್ಮ ಕರ್ಚೀಪ್ ನಲ್ಲಿ ಕಟ್ಟಿಕೊಂಡಿದ್ದಾರೆ. ಈ ವೇಳೆ ಪೊಲೀಸರ ಸೋಗಿನಲ್ಲಿದ್ದ ಖದೀಮ ಕೊಡಿ ಚೆನ್ನಾಗಿ ಕಟ್ಟಿ ಕೊಡುತ್ತೇವೆ ಎಂದು ಹೇಳಿ ಕರ್ಚೀಪ್ ಪಡೆದುಕೊಂಡಿದ್ದಾನೆ. ಇನ್ನೋರ್ವ ದಂಪತಿಯನ್ನು ಮಾತನಾಡಿಸುತ್ತಿರುವಷ್ಟರಲ್ಲಿ ಕರ್ಚೀಫ್ ಬದಲು ಮಾಡಿ ದಂಪತಿಗೆ ನೀಡಿ ಪರಾರಿಯಾಗಿದ್ದಾರೆ. ಸ್ವಲ್ಪ ದೂರ ಹೋಗಿ ದಂಪತಿಗಳು ಕರ್ಚೀಪ್ ನೋಡಿದಾಗ ತಾವು ಮೋಸ ಹೋಗಿರುವುದು ತಿಳಿದಿದೆ. ಸದ್ಯ ಈ ಕುರಿತು ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
buy zithromax 250 mg online
is zithromax an antibiotic