Thursday, October 6, 2022
Powertv Logo
Homeರಾಜ್ಯನಾನು ನಿಂಬೆಹಣ್ಣು ಮಾರುತ್ತಿದ್ದೆ : ಬಿ.ಎಸ್​ ಯಡಿಯೂರಪ್ಪ

ನಾನು ನಿಂಬೆಹಣ್ಣು ಮಾರುತ್ತಿದ್ದೆ : ಬಿ.ಎಸ್​ ಯಡಿಯೂರಪ್ಪ

ಬೆಂಗಳೂರು: ನಾನು ಚಿಕ್ಕ ವಯಸ್ಸಿನಲ್ಲಿ ಮಂಡ್ಯ ಬೀದಿಯಲ್ಲಿ ನಿಂಬೆ ಹಣ್ಣು, ತರಕಾರಿ ಮಾರಿ ಜೀವನ ಮಾಡುತ್ತಿದ್ದೆ ಎಂದು ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಹೇಳಿದ್ದಾರೆ.

ಸ್ವಾಮಿ ವಿವೇಕಾನಂದ ಜಯಂತಿ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣ ಇಲಾಖೆ ಕಂಠೀರವ ಒಳಾಂಗಣ ಕ್ರೀಡಾಗಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಂಡ್ಯದಲ್ಲಿ ನಾನು ಹೈಸ್ಕೂಲ್​ ಓದುತ್ತಾ ನಿಂಬೆಹಣ್ಣು, ತರಕಾರಿ ಮಾರುತ್ತಿದ್ದೆ. ಇವತ್ತು ರಾಜ್ಯದ ಆರೂವರೆ ಕೋಟಿ ಜನರ ಆಶೀರ್ವಾದಿಂದ ಒಂದಲ್ಲ ನಾಲ್ಕೂ ಬಾರಿ ಮುಖ್ಯಮಂತ್ರಿಯಾಗಿದ್ದೇನೆ. ಈ ಮಾತನ್ನು ನಿಮ್ಮ ಮುಂದೆ ನಿಂತು ಹೆಮ್ಮೆಯಿಂದ ಹೇಳುತ್ತಿದ್ದೇನೆಂದು ಹಳೇ ನೆನಪನ್ನು ಮೆಲುಕು ಹಾಕಿದ್ದಾರೆ.

ಕೆ.ಆರ್​ ಪೇಟೇ ತಾಲ್ಲೂಕಿನ ಬೂಕನಕೆರೆ ಅನ್ನೋ ಸಣ್ಣ ಗ್ರಾಮದಲ್ಲಿ ಜನಿಸಿದ ನಾನು ಅನೇಕ ಹಿರಿಯರ ಆರ್ಶೀವಾದದಿಂದ ಮಾರ್ಗದರ್ಶನದಿಂದ ಇಷ್ಟು ಎತ್ತರಕ್ಕೆ ಬೆಳೆಯೋಕೆ ಸಾಧ್ಯವಾಯ್ತು. ಪ್ರಜಾಪ್ರಭುತ್ವದಲ್ಲಿ ಎಲ್ಲವೂ ಸಾಧ್ಯವಿದೆ ಎಂದಿದ್ದಾರೆ.

9 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments