“ನಾನು ಅಲ್ಲಮನೂ ಹೌದು, ಡಾಲಿಯೂ ಹೌದು”!  : ಟೀಕಾಕಾರರಿಗೆ ಧನಂಜಯ್ ತಿರುಗೇಟು

0
5120

ತಾವಾಯ್ತು ತಮ್ಮ ಸಿನಿಮಾ ಆಯ್ತು ಅಂತಿರೋ ನಟ ಡಾಲಿ ಧನಂಜಯ್. ಹೊಸ ಹೊಸ ಸಿನಿಮಾಗಳ ಮೂಲಕ ಸದಾ ಸುದ್ದಿಯಲ್ಲಿರುವ ಅವರು, ನಿನ್ನೆಯಿಂದ ಟ್ವೀಟೊಂದರಿಂದ ಸುದ್ದಿಯಲ್ಲಿದ್ದಾರೆ! ಚಿಂತಕ ಚಕ್ರವರ್ತಿ ಸೂಲಿಬೆಲೆ ಟ್ವೀಟ್​ಗೆ ‘ಏನಾದರೂ ಆಗು ಮೊದಲು ಮಾನವನಾಗು’ ಎಂದು ರೀ ಟ್ವೀಟ್​ ಮಾಡಿದ್ದರು. ಆ ವಿಚಾರವಾಗಿ ಸಿಕ್ಕಾಪಟ್ಟೆ ಪರ – ವಿರೋಧ ಚರ್ಚೆಗಳು ನಡೀತಾ ಇವೆ. ಈ ನಡುವೆ ಅವರು ತಮ್ಮ ಆ ಹೇಳಿಕೆಗೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದ್ದಾರೆ. ಜೊತೆಗೆ ನಾನು ಅಲ್ಲಮನೂ ಹೌದು, ಡಾಲಿಯೂ ಹೌದು ಎನ್ನುವ

ತನ್ನ ಟ್ವೀಟ್​ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದ್ದಂತೆ ಅದರ ಗಂಭೀರತೆಯನ್ನು ಅರಿತ ಡಾಲಿ ಧನಂಜಯ್​ ವಿಡಿಯೋ ಮೂಲಕ ವಿವಾದಕ್ಕೆ ಅಂತ್ಯಹಾಡುವ ಪ್ರಯತ್ನ ಮಾಡಿದ್ದಾರೆ.

 “ ಕವಿ ಸಿದ್ಧಯ್ಯ ಪುರಾಣಿಕ್​ ಅವರ ಏನಾದರೂ ಆಗು ಮೊದಲು ,ಮಾನವನಾಗು ಎಂಬ ಪದ್ಯವನ್ನು ಪೂರ್ತಿಯಾಗಿ ಓದಿದ್ದರೆ ನನ್ನ ಟ್ವೀಟ್​ನ ಅರ್ಥ ತಿಳಿಯುತ್ತದೆ. ಕೊರೋನಾ ವೈರಸ್​ನಿಂದಾಗಿ ಇಡೀ ಪ್ರಪಂಚವೇ ನಲುಗಿ ಹೋಗಿದೆ. ಈ ಸಂದರ್ಭದಲ್ಲಿ ಇಟಲಿ ಸರ್ಕಾರ ಮಾಡಿರುವ ನಿರ್ಧಾರವೂ ತಪ್ಪು, ಇಟಲಿ ಅಂತಹ ಸ್ಥಿತಿಯಲ್ಲಿದೆ ಎಂದರೆ ನಾವು ಆ ವಿಷಯದ ಗಂಭೀರತೆಯನ್ನು ಅರಿತುಕೊಳ್ಳಬೇಕು. ಬದಲಾಗಿ ವ್ಯಂಗ್ಯ ಮಾಡುವುದು ಖಂಡಿತಾ ಸರಿಯಲ್ಲ”  ಎಂದು ಹೇಳಿದ್ದಾರೆ

ಇನ್ನು ಇದೇ ವಿಚಾರವಾಗಿ ತಮ್ಮನ್ನು ಟೀಕಿಸಿದವರಿಗೆ, “ನನ್ನ ನಾಡು, ಭಾಷೆಯ ಬಗ್ಗೆ ಖಂಡಿತಾ ನನಗೆ ಅಭಿಮಾನವಿದೆ. ಇವೆಲ್ಲದರ ಅಸ್ತಿತ್ವದ ವಿಚಾರ ಬಂದಾಗ ಹೋರಾಡುವ ಪ್ರವೃತ್ತಿಯೂ ನನ್ನಲ್ಲಿದೆ. ಸಮಾಜಕ್ಕೆ ಎಲ್ಲರ ಕೊಡುಗೆಯೂ ಬಹಳ ಮುಖ್ಯ. ನಾನು ಮಾಡಿರುವ ಪಾತ್ರದ ಬಗ್ಗೆ ಪ್ರಶ್ನೆ ಮಾಡಿರುವ ನೀವುಗಳು ಎಂಥಾ ಪಾತ್ರಗಳನ್ನು ಮಾಡಿದ್ದೀರಾ? ನಾನು ಅಲ್ಲಮನೂ ಹೌದು, ಡಾಲಿಯೂ ಹೌದು ನನಗೆ ಜಾತಿ ಧರ್ಮ ಮುಖ್ಯ ಅಲ್ಲ, ಸಂಬಂಧಗಳು ಮಾತ್ರ ಮುಖ್ಯ.”  ಎಂದು ತಿರುಗೇಟು ನೀಡಿದ್ದಾರೆ.

LEAVE A REPLY

Please enter your comment!
Please enter your name here