Monday, May 23, 2022
Powertv Logo
Homeದೇಶಜಾಗತಿಕ ಮಟ್ಟದಲ್ಲಿ ಪಾಕ್​ಗೆ ಮತ್ತೊಮ್ಮೆ ಮುಖಭಂಗ

ಜಾಗತಿಕ ಮಟ್ಟದಲ್ಲಿ ಪಾಕ್​ಗೆ ಮತ್ತೊಮ್ಮೆ ಮುಖಭಂಗ

ಭಾರತ ಸಂವಿಧಾನದ ಆರ್ಟಿಕಲ್​​ 370 ಅನ್ನು ರದ್ದು ಮಾಡಿರೋದನ್ನು ವಿರೋಧಿಸಿ ಪಾಕಿಸ್ತಾನ ಬರೆದಿದ್ದ ಪತ್ರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಲು ವಿಶ್ವಸಂಸ್ಥೆ ನಿರಾಕರಿಸಿದೆ. ಹೀಗಾಗಿ ಭಾರತದ ವಿರುದ್ಧ ಪಾಕ್​ಗೆ ಜಾಗತಿಕ ಮಟ್ಟದಲ್ಲಿ ತೀವ್ರ ಮುಖಭಂಗವಾಗಿದೆ.

ಹೌದು, ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನ-ಮಾನ ಕಲ್ಪಿಸಿದ್ದ ಕಲಂ 370ನ್ನು ರದ್ದು ಮಾಡಿರುವುದು ನೆರೆರಾಷ್ಟ್ರ ಪಾಕಿಸ್ತಾನಕ್ಕೆ ಆಘಾತ ನೀಡಿದೆ. ಭಾರತ ಸರ್ಕಾರದ ಈ ನಿರ್ಧಾರದಿಂದಾಗಿ ಮುಂದೆ ಪಿಒಕೆಯನ್ನು ಕಳೆದುಕೊಳ್ಳಬಹುದೆಂಬ ಭೀತಿ ಪಾಕಿಸ್ತಾನಕ್ಕೆ ಎದುರಾಗಿದೆ. ಇನ್ಮುಂದೆ ಕಾಶ್ಮೀರದಲ್ಲಿ ಉಗ್ರ ಚಟುವಟಿಕೆಗಳಿಗೆ ಕಡಿವಾಣ ಬೀಳಲಿರುವುದರಿಂದ ಸಹಜವಾಗಿಯೇ ಪಾಕಿಸ್ತಾನ ತತ್ತರಿಸಿದೆ. ಹೀಗಾಗಿ ಆರ್ಟಿಕಲ್​​​ 370 ರದ್ದು ಮಾಡಿರೋದನ್ನು ವಿರೋಧಿಸಿ ವಿಶ್ವಸಂಸ್ಥೆಗೆ ಪಾಕ್​​​ ಪತ್ರ ಬರೆದಿತ್ತು. ಪತ್ರದಲ್ಲಿ ಭಾರತ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯವನ್ನು ಉಲ್ಲಂಘಿಸಿದೆ ಎಂದು ಆರೋಪಿಸಲಾಗಿತ್ತು.

ಆದ್ರೆ ಈ ಪತ್ರದ ಬಗ್ಗೆ ಯಾವೂದೇ ಪ್ರತಿಕ್ರಿಯೆಯನ್ನು ನೀಡೋದಿಲ್ಲ ಅಂತ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೋ  ಗುಟೆರೆಸ್ ಹೇಳಿದ್ದಾರೆ. ಹೀಗಾಗಿ ಜಾಗತಿಕವಾಗಿ ಭಾರತದ ಕ್ರಮವನ್ನು ಟೀಕಿಸಿದ ಪಾಕ್​​ಗೆ ತೀವ್ರ ಹಿನ್ನೆಡೆಯಾಗಿದೆ.

18 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments