Sunday, June 26, 2022
Powertv Logo
Homeಜಿಲ್ಲಾ ಸುದ್ದಿ80 ಅಡಿ ಎತ್ತರದ ಬಾವಿಗೆ ಬಿದ್ದ ಎಮ್ಮೆ ! ಸತತ 4 ಗಂಟೆ ರಕ್ಷಣಾ ಕಾರ್ಯಾಚರಣೆ...

80 ಅಡಿ ಎತ್ತರದ ಬಾವಿಗೆ ಬಿದ್ದ ಎಮ್ಮೆ ! ಸತತ 4 ಗಂಟೆ ರಕ್ಷಣಾ ಕಾರ್ಯಾಚರಣೆ ಯಶಸ್ವಿ ..

ದಾವಣಗೆರೆ : 80 ಅಡಿ ಆಳದ ಬಾವಿಗೆ ಎಮ್ಮೆಯೊಂದು ಬಿದ್ದಿರುವ ಘಟನೆ ಹರಪ್ಪನಹಳ್ಳಿ ತಾಲ್ಲೂಕಿನ ಲಕ್ಷ್ಮೀಪುರ ಗ್ರಾಮದಲ್ಲಿ ನಡೆದಿದೆ.

ಎತ್ತರದ ಕಟ್ಟೆ ಇದ್ದರು, ಎಮ್ಮೆ ಬಾವಿಗೆ ಬಿದ್ದಿದ್ದು ಹೇಗೆ ಎಂದು ಎಲ್ಲರಲ್ಲೂ ಆಶ್ಚರ್ಯ ಮೂಡಿದೆ.. ಕೋಟ್ರೇಶ್ ನಾಯ್ಕ್ ಎನ್ನುವರಿಗೆ ಸೇರಿದ ಎಮ್ಮೆ ಇದಾಗಿದ್ದು, ರಾತ್ರಿ ಸಮಯದಲ್ಲಿ ಎರಡು ಎಮ್ಮೆಗಳನ್ನು ಬಾವಿ ಪಕ್ಕದಲ್ಲಿ ಕಟ್ಟಲಾಗಿದೆ.. ಈ ಸಮಯದಲ್ಲಿ ಎರಡು ಎಮ್ಮೆಗಳು ಕಾದಾಟ ನಡೆಸಿವೆ ಎನ್ನಲಾಗಿದ್ದು, ಬಾವಿ ಕಟ್ಟೆ ಎಗರಿ, ಜಾಲರಿ ಸಮೇತ ಆಳದ ಬಾವಿಗೆ ಎಮ್ಮೆ ಬಿದ್ದಿದೆ ಎಂದು ಹೇಳಲಾಗಿದೆ..

ಅಗ್ನಿಶಾಮಕ ದಳದಿಂದ ಎಮ್ಮೆ ರಕ್ಷಣೆ : ಇನ್ನೂ 80ಅಡಿ ಆಳದಲ್ಲಿ ಎಮ್ಮೆ ಬಿದಿದ್ದು, ತಲೆ ಮೇಲಕ್ಕೆ ಇರಿಸಿ ಎಮ್ಮೆ ಈಜಾಡುತ್ತಾ ಪ್ರಾಣ ಉಳಿಸಿಕೊಂಡಿದೆ.‌ಸ್ಥಳಕ್ಕೆ ಆಗಮಿಸಿದ ದಾವಣಗೆರೆ ಅಗ್ನಿಶಾಮಕ ದಳ ಸಿಬ್ಬಂದಿ ಬಸವಪ್ರಭು ಶರ್ಮಾ ನೇತೃತ್ವದಲ್ಲಿ, ಬೆಳಗ್ಗೆ 5 ಗಂಟೆಯಿಂದ 9 ಗಂಟೆಯ ವರೆಗೂ ಕಾರ್ಯಾಚರಣೆ ನಡೆಸಿ, ರೋಪ್ ಗಳ ಮೂಲಕ ಹರಸಾಹಸ ಪಟ್ಟು ಎಮ್ಮೆಯನ್ನು ರಕ್ಷಣೆ ಮಾಡಿದ್ದಾರೆ..

16 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments