Home P.Special ಉತ್ತರ ಕನ್ನಡ ಜಿಲ್ಲೆಯ ಕುಗ್ರಾಮದ ಮಕ್ಕಳಿಗೆ ನಿತ್ಯ ಮೈಸೂರಿಂದ ಪಾಠ…! ಇವರಂಥಾ ಶಿಕ್ಷಕಿ ಬೇರೆಲ್ಲೂ ಇಲ್ಲ..!

ಉತ್ತರ ಕನ್ನಡ ಜಿಲ್ಲೆಯ ಕುಗ್ರಾಮದ ಮಕ್ಕಳಿಗೆ ನಿತ್ಯ ಮೈಸೂರಿಂದ ಪಾಠ…! ಇವರಂಥಾ ಶಿಕ್ಷಕಿ ಬೇರೆಲ್ಲೂ ಇಲ್ಲ..!

ಕಾರವಾರ : ಅದೊಂದು ಕುಗ್ರಾಮ.. ಅಲ್ಲಿ ಮೊಬೈಲ್ ನೆಟ್​ ವರ್ಕ್​ ಸಿಗಲ್ಲ.. ಯಾರಿಗಾದ್ರೂ ಕಾಲ್​ ಮಾಡ್ಬೇಕು, ಮಾತಾಡ್ಬೇಕು ಅಂತಿದ್ರೆ ಕಿಲೋಮೀಟರ್ ಗಟ್ಟಲೆ ಹೋಗಿ, ನೆಟ್​ವರ್ಕ್​ ಸರ್ಚ್​ ಮಾಡಿ ಕಾಲ್​ ಮಾಡಿ ಹಿಂತಿರುಗಬೇಕು..! ನೆಟ್​ವರ್ಕ್​ ಸರ್ಚ್ ಮಾಡಿ ಕಾಲ್​ ಮಾಡೋದು ಅಂದ್ರೆ ಅದು ಅಲ್ಲಿನ ಜನರಿಗೆ ಹೆಚ್ಚು-ಕಮ್ಮಿ ಯಾಗ ಮಾಡಿದಂತೆಯೇ! ಆದ್ರೆ ಅಂಥಾ ಗ್ರಾಮದಲ್ಲೂ ಮೊಬೈಲ್​​ ಮೂಲಕ ಪಾಠ ನಡೀತಿದೆ..! ಮೈಸೂರಿನಿಂದ ಶಿಕ್ಷಕಿಯೊಬ್ಬರು ನಿತ್ಯ ದೂರದ ಕುಗ್ರಾಮದ ಊರಿನ ಮಕ್ಕಳಿಗೆ ಪಾಠ ಮಾಡ್ತಿದ್ದಾರೆ…! ಆ ಶಿಕ್ಷಕಿಯಾರು, ಅವರು ಎಲ್ಲಿನ ಮಕ್ಕಳಿಗೆ ಮೊಬೈಲ್ ಪಾಠ ಮಾಡ್ತಿದ್ದಾರೆ ಅನ್ನೋ ಕುತೂಹಲವೇ ಈ ಸ್ಟೋರಿ ಓದಿ..

ಅದು ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ ತಾಲ್ಲೂಕಿನ ಡೇರಿಯಾ ಅನ್ನೋ  ಕುಗ್ರಾಮ.  ಅಲ್ಲಿನ ಮಕ್ಕಳಿಗೆ ಮೊಬೈಲ್ ಮೂಲಕ ಪಾಠ ಮಾಡ್ತಿರೋರು ಮೈಸೂರಿನ ಒಂಟಿಕೊಪ್ಪಲ್ ನಿವಾಸಿ ಆರ್.ಪೂರ್ಣಿಮಾ.

ಡೇರಿಯಾ ಹಳ್ಳಿ ಮಕ್ಕಳು ದೂರದ ಮೈಸೂರಿನ ಶಿಕ್ಷಕಿಯ ಪಾಠವನ್ನು ಮಿಸ್ ಮಾಡಿಕೊಳ್ಳೋದೇ ಇಲ್ಲ. ಅವರ ಧ್ವನಿಗೆ ಮಕ್ಕಳು ಶ್ರದ್ಧೆಯಿಂದ ಕಿವಿಯಾಗುತ್ತಾರೆ, ಸಂವಹನ ನಡೆಸುತ್ತಾರೆ. ಆದರೆ, ಶಿಕ್ಷಕಿ ಮಾತ್ರ ‘ಅದೃಶ್ಯ’ವಾಗಿಯೇ ಇರುತ್ತಾರೆ.  ಬುಡಕಟ್ಟು ಸಮುದಾಯದ  ಸುಮಾರು 10 ವಿದ್ಯಾರ್ಥಿಗಳಿಗೆ  ಆರ್.ಪೂರ್ಣಿಮಾ, ಅವರು ಮೊಬೈಲ್ ಫೋನ್ ಮೂಲಕ ಇಂಗ್ಲಿಷ್ ಪಾಠ ಮಾಡುತ್ತಿದ್ದಾರೆ.

ನಾಲ್ಕನೇ ತರಗತಿಯಿಂದ ಎಸ್ಸೆಸ್ಸೆಲ್ಸಿವರೆಗಿನ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಜೋಯಿಡಾ ತಾಲ್ಲೂಕು ಕೇಂದ್ರದಿಂದ ಸರಿಸುಮಾರು 12 ಕಿಲೋಮೀಟರ್ ದೂರದ ಈ ಗ್ರಾಮದಲ್ಲಿ ಒಂದೆರಡು ಮನೆಗಳ ಬಳಿ ಮಾತ್ರ ಮೊಬೈಲ್ ಸಿಗ್ನಲ್ ನೆಟ್ ವರ್ಕ್ ಬರತ್ತೆ. ಅದೂ ಒಂದೆರಡು ‘ಕಡ್ಡಿ ಮಾತ್ರ.! ಇಲ್ಲಿ ಇಂಟರ್‌ನೆಟ್ ಸಂಪರ್ಕವಂತೂ ದೂರದ ಮಾತು. ಹಾಗಾಗಿ ಆನ್‌ಲೈನ್ ತರಗತಿ ನಡೆಸುವುದು ಕಷ್ಟವೇ ಸರಿ..! ಹೀಗಾಗಿ ಪೂರ್ಣಿಮಾ ಅವರು, ಮೊಬೈಲ್ ಫೋನ್ ಮೂಲಕವೇ ಜ್ಞಾನಧಾರೆ ಮಾಡುತ್ತಿದ್ದಾರೆ.

 ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ನಿವೃತ್ತ ಪ್ರೊಫೆಸರ್ ಆಗಿರುವ ಪೂರ್ಣಿಮಾ ಅವರಿಗೆ ಜೊಯಿಡಾದ ಕುಣಬಿ ಸಮಾಜದ ಅಧ್ಯಕ್ಷ ಡಾ.ಜಯಾನಂದ ಡೇರೇಕರ್  ಸಾಥ್ ಸಿಕ್ಕಿದೆ. ಅವರಿಬ್ಬರ ಇಚ್ಛಾಶಕ್ತಿಯಿಂದ ಮಕ್ಕಳು ಇಂಗ್ಲಿಷ್ ಕಲಿಯುವಂತಾಗಿದೆ .. ಒಂದು ಮೊಬೈಲ್ ಫೋನ್ ಹಾಗೂ ಬ್ಲೂಟೂಥ್ ಸ್ಪೀಕರ್ ಖರೀದಿಸಿ,  ಮೊಬೈಲ್‌ ಅನ್ನು ಸಿಗ್ನಲ್ ಸಿಗುವ ಮನೆಯೊಂದರಲ್ಲಿಟ್ಟರು. ಬಳಿಕ ಬ್ಲೂಟೂಥ್ ಮೂಲಕ ಸ್ಪೀಕರ್‌ಗೆ ಸಂಪರ್ಕ ನೀಡಿದ್ದಾರೆ. ಆ ಮೂಲಕ ಸುಮಾರು ಒಂದು ತಿಂಗಳಿನಿಂದ ಪ್ರತಿದಿನ ಮಕ್ಕಳಿಗೆ ಒಂದು ಗಂಟೆಗಳ ಕಾಲ ಪಾಠ ಮಾಡ್ತಿದ್ದಾರೆ.

ಕೊರೊನಾ ಲಾಕ್‌ಡೌನ್‌ನ ಈ ದಿನಗಳಲ್ಲಿ ಎಲ್ಲೆಡೆ ಆನ್‌ಲೈನ್ ಶಿಕ್ಷಣದ್ದೇ ಚರ್ಚೆಯಾಗುತ್ತಿದೆ. ಆದರೆ, ಕಾಡಿನ ಮಧ್ಯೆ ಇರುವ ಈ ಊರಿನಲ್ಲಿ ಅದು ಕಷ್ಟ ಸಾಧ್ಯ. ಅಂತದ್ರಲ್ಲಿ ಪೂರ್ಣಿಮಾ ಅವರ ಕೆಲಸ ನಿಜಕ್ಕೂ ಶ್ಲಾಘನೀಯ. ಮಕ್ಕಳು ಕೂಡ ಕಲಿಕೆಗೆ ಆಸಕ್ತಿ ತೋರಿ, ಪಾಠಕ್ಕೆ ತಪ್ಪದೇ ಹಾಜರಾಗಿರುವುದು ಕೂಡ ಖುಷಿ ವಿಚಾರವೇ…

 

– ಉದಯ ಬರ್ಗಿ , ಕಾರವಾರ

LEAVE A REPLY

Please enter your comment!
Please enter your name here

- Advertisment -

Most Popular

5 ವರ್ಷದ ಬಾಲಕಿ ಕಾಣೆ

ಬೆಂಗಳೂರು : ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ 5 ವರ್ಷದ ಬಾಲಕಿ ಕಾಣೆಯಾಗಿದ್ದಾಳೆ. ಲೋಕಿತ ಕೆ.ಮರನ್ ಕಾಣೆಯಾಗಿರುವ ಬಾಲಕಿ‌. ಈಕೆ ತನ್ನ ತಾತನ ಜೊತೆ ಸೆ.18 ರಂದು ಮನೆಯಿಂದ ತೆರಳಿದ್ದಳು. ಮೆಜೆಸ್ಟಿಕ್ ನಿಲ್ದಾಣದಲ್ಲಿ...

ಅಕ್ಕ ಗೌರಿ ಲಂಕೇಶ್​ರನ್ನು ನೆನೆದು ಕಣ್ಣೀರಿಟ್ಟ ಇಂದ್ರಜಿತ್ ಲಂಕೇಶ್..!

ಬೆಂಗಳೂರು : ಸ್ಯಾಂಡಲ್​​ವುಡ್​ ಡ್ರಗ್ಸ್​ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಸಿಸಿಬಿ ವಿಚಾರಣೆ ಎದುರಿಸಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಮತ್ತೊಮ್ಮೆ ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗುತ್ತಿದ್ದಾರೆ.  ಇಂದು ಸಿಸಿಬಿ ವಿಚಾರಣೆಗೆ ಹೋಗುವ...

ಸ್ಯಾಂಡಲ್​​ವುಡ್​​​​​ನಲ್ಲಿ ಡ್ರಗ್​ ಮಾಫಿಯಾ : ಇಂದು ಸಿಸಿಬಿಯಿಂದ ನಟಿ ರಾಗಿಣಿ ವಿಚಾರಣೆ

ಬೆಂಗಳೂರು :  ಸ್ಯಾಂಡಲ್​​​​ವುಡ್​​ನಲ್ಲಿ ಡ್ರಗ್​​ ಮಾಫಿಯಾದ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಾ ಇದೆ. ಚಂದನವನಕ್ಕೆ ಮಾದಕ ಜಾಲ ಹಬ್ಬಿದೆಯೇ ಅಥವಾ ಇಲ್ಲವೇ ಅನ್ನೋದು ಸದ್ಯದ ಗಾಂಧಿನಗರದ ಹಾಟ್ ಸುದ್ದಿ. ಇದಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ...

ಕೊರೋನಾದಿಂದ ಮಾಜಿ ಶಾಸಕ ಅಪ್ಪಾಜಿ ಗೌಡ ನಿಧನ

ಶಿವಮೊಗ್ಗ : ಭದ್ರಾವತಿಯ ಜೆಡಿಎಸ್ ನ ಮಾಜಿ ಶಾಸಕ ಅಪ್ಪಾಜಿಗೌಡ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಕೊರೋನಾ ಸೋಂಕಿಗೆ ಒಳಗಾಗಿದ್ದ ಅವರು,  ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅಪ್ಪಾಜಿಗೌಡರಿಗೆ 69 ವರ್ಷ ವಯಸ್ಸಾಗಿತ್ತು. ಪತ್ನಿ...

Recent Comments