Friday, April 26, 2024

ಟೀಮ್ ಇಂಡಿಯಾದ ಯಾವೊಬ್ಬ ಪ್ಲೇಯರ್ ಕೂಡ ಇಲ್ಲಿ ಒಡಿಐ ಆಡಿಲ್ಲ..!

ಇಂಡಿಯಾ- ವೆಸ್ಟ್ ಇಂಡೀಸ್ ನಡುವಿನ 4ನೇ ಒಡಿಐ ಗೆ ಮುಂಬೈನ ಬ್ರೆಬೋರ್ನ್​ ಸ್ಟೇಡಿಯಂ ಸಾಕ್ಷಿಯಾಗಲಿದೆ. ಬರೋಬ್ಬರಿ 9 ವರ್ಷಗಳ ಬಳಿಕ ಬ್ರೆಬೋರ್ನ್ ಸ್ಟೇಡಿಯಂನಲ್ಲಿ ಒನ್ ಡೇ ಇಂಟರ್ ನ್ಯಾಷನಲ್ ಮ್ಯಾಚ್ ನಡೆಯುತ್ತಿದೆ. ವಿಶೇಷ ಅಂದ್ರೆ ಪ್ರಸ್ತುತ ವೆಸ್ಟ್ಇಂಡೀಸ್ ವಿರುದ್ಧದ ಟೂರ್ನಿಯಲ್ಲಿ ಆಡುತ್ತಿರೋ ಟೀಮ್ ಇಂಡಿಯಾದ ಯಾವೊಬ್ಬ ಪ್ಲೇಯರ್ ಕೂಡ ಈ ಪಿಚ್​ನಲ್ಲಿ ಇಂಟರ್ ನ್ಯಾಷನಲ್ ಮ್ಯಾಚ್ ಆಡಿಲ್ಲ. ಈ ಫೀಲ್ಡ್ ನಲ್ಲಿ ಭಾರತ 23 ವರ್ಷಗಳ ಬಳಿಕ ಒಡಿಐ ಆಡುತ್ತಿದೆ. ಅಷ್ಟೇ ಅಲ್ದೆ ವೆಸ್ಟ್ ಇಂಡೀಸ್ ಇಲ್ಲಿ 12 ವರ್ಷದ ನಂತ್ರ ಕಣಕ್ಕಿಳಿಯುತ್ತಿದೆ.
1995ರಲ್ಲಿ ನ್ಯೂಜಿಲೆಂಡ್ ವಿರುದ್ಧ ಮೊಹಮ್ಮದ್ ಅಜರುದ್ದೀನ್ ನಾಯಕತ್ವದಲ್ಲಿ ಟೀಮ್ ಇಂಡಿಯಾ ಬ್ರೆಬೋರ್ನ್​ ಸ್ಟೇಡಿಯಂನಲ್ಲಿ ಒಡಿಐ ಆಡಿತ್ತು. ಆ ಮ್ಯಾಚೇ ಇಲ್ಲಿ ಇಂಡಿಯಾ ಆಡಿದ ಫಸ್ಟ್ ಅಂಡ್ ಲಾಸ್ಟ್ ಮ್ಯಾಚ್, ಈ ಮ್ಯಾಚನ್ನು ಇಂಡಿಯಾ ಗೆದ್ದಿತ್ತು.
ವೆಸ್ಟ್ ಇಂಡೀಸ್ 2006ರಲ್ಲಿ ಐಸಿಸಿ ಚಾಂಪಿಯನ್ಸ್‌ ಟ್ರೋಫಿಯ ಫೈನಲ್ ಮ್ಯಾಚ್ ಅನ್ನು ಆಸೀಸ್ ಎದುರು ಈ ಅಂಗಳದಲ್ಲಿ ಆಡಿತ್ತು. ಆ ಮ್ಯಾಚ್ ನಲ್ಲಿ ಆಸೀಸ್ ಗೆಲುವಿನ ನಗೆ ಬೀರಿತ್ತು.

ಇನ್ನೊಂದು ಮುಖ್ಯ ವಿಷ್ಯ ಅಂದ್ರೆ ಇಲ್ಲಿ ಭಾರತಕ್ಕಿಂತ ವಿಂಡೀಸ್ ಹೆಚ್ಚು ಮ್ಯಾಚ್ ಗಳನ್ನಾಡಿದೆ. ವಿಂಡೀಸ್ ಈ ಅಂಗಳದಲ್ಲಿ 4 ಒಡಿಐ ಆಡಿದ್ದು, 3ರಲ್ಲಿ ಸೋತು 1ರಲ್ಲಿ ಗೆಲುವು ಪಡೆದಿದೆ. ಇನ್ನು ಭಾರತ ಇಲ್ಲಿ 2009ರಲ್ಲಿ ಕೊನೆ ಟೆಸ್ಟ್ ಆಡಿತ್ತು. ಒಟ್ಟು 18 ಟೆಸ್ಟ್ ಆಡಿರೋ ಟೀಮ್ ಇಂಡಿಯಾ 5 ಮ್ಯಾಚ್ ಗಳಲ್ಲಿ ಗೆದ್ದಿದೆ. ಆಡಿರೋ ಏಕೈಕ ಟಿ20, ಒಡಿಐ ನಲ್ಲಿ ಗೆದ್ದು ಬೀಗಿದೆ.
ಈ ನಾಲ್ಕನೇ ಒಡಿಐ ನಿಗದಿಯಾಗಿದ್ದ ವೇಳಾಪಟ್ಟಿಯಂತೆ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಬೇಕಿತ್ತು. ಆದ್ರೆ, ಮುಂಬೈ ಕ್ರಿಕೆಟ್ ಸಂಸ್ಥೆ ಹಾಗೂ ಬಿಸಿಸಿಐ ನಡುವಿನ ಆಂತರಿಕ ಸಮಸ್ಯೆಯಿಂದ ಬೆಬ್ರೋರ್ನ್ ಗೆ ಸ್ಥಳಾಂತರಗೊಂಡಿದೆ.

RELATED ARTICLES

Related Articles

TRENDING ARTICLES